ವಿಟ್ಲ: ಸರಕಾರದ ಆದೇಶದಂತೆ ಅ.25 ರಂದು 1-5ನೇ ತರಗತಿ ವರೆಗೆ ಶಾಲೆ ಪ್ರಾರಂಭವಾಗಿರುವುದರಿಂದ ಪಡಿಬಾಗಿಲು ಶಾಲೆಯಲ್ಲಿ ಪೋಷಕರ ಸಭೆಯು ಅ.22 ರಂದು ನಡೆಯಿತು.
ಶಾಲಾ ವಿದ್ಯಾರ್ಥಿಗಳಾದ ಧನ್ವಿತಾಕಾರಂತ ಮತ್ತು ಧನುಶ್ರೀ ರವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಸಭಾಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಜಗಜ್ಜೀವನ ರಾಮ್ ಶೆಟ್ಟಿ, ಜನಾರ್ಧನ ಬಂಗೇರ, ಸೀತಾರಾಮ ಶೆಟ್ಟಿ, ಐತಪ್ಪ ನಾಯ್ಕ, ಪುಷ್ಪಲತಾ, ವಿಶಾಲಾಕ್ಷಿ, ಉಷಾ, ಶಮೀನಾ, ಜಯಶ್ರೀ, ಕಾಂತಿ, ಭವಾನಿ, ಪಿ.ಕೆ.ದಾಮೋದರ, ಜಿನಚಂದ್ರ ಜೈನ್ ಉಪಸ್ಥಿತರಿದ್ದರು.
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಬಾಲಕೃಷ್ಣ ಕಾರಂತರು 1ರಿಂದ5ನೇ ತರಗತಿ ಪ್ರಾರಂಭವಾಗುವಾಗ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ ಸವಿವರವಾಗಿ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ರವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ, ಶಾಲಾ ಪ್ರಾರಂಭದ ಬಗ್ಗೆ ಮತ್ತು ಎಲ್ಲರೂ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಸಹಶಿಕ್ಷಕಿ ಮಲ್ಲಿಕಾ.ಕೆ.ಎಸ್ ಧನ್ಯವಾದ ಸಲ್ಲಿಸಿದರು. ಸಹಶಿಕ್ಷಕಿ ಲಲಿತಾ.ಕೆ ಕಾರ್ಯಕ್ರಮ ನಿರೂಪಿಸಿದರು.






























