ಉಜಿರೆ : ವಿದ್ಯಾಕಾಶಿ ಉಜಿರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದೂರದೂರಿನ ಹಿಂದೂ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಪಿಜಿ ನೀಡುವ ನೆಪದಲ್ಲಿ ಸ್ನೇಹ ಬೆಳೆಸಿ ಲೈಂಗಿಕವಾಗಿ ಬಳಸಿಕೊಂಡು ಲವ್ ಜಿಹಾದ್ ಬಲೆಗೆ ಬೀಳಿಸಿಕೊಳ್ಳುತ್ತಿರುವ ಬಗ್ಗೆ ಉಜಿರೆ ಮೂಲದ ವ್ಯಕ್ತಿ ವಿರುದ್ಧ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿರುವ ವ್ಯಕ್ತಿಯೊಬ್ಬರ ಮಗ ಅಮನ್ ಎಂಬಾತ ತನ್ನ ಕ್ರಿಶ್ಚಿಯನ್ ಗೆಳತಿಯ ಪಿಜಿಯಲ್ಲಿರುವ ವಿದ್ಯಾರ್ಥಿನಿಯ ನಂಬರ್ ಪಡೆದು, ಸ್ನೇಹ ಬೆಳೆಸಿ ಮಾತಿನಲ್ಲಿ ಮರುಳು ಮಾಡಿ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಆಕೆಯ ಬೆತ್ತಲೆ ಫೋಟೋ ಪಡೆದು ನೀನು ನನ್ನ ಜೊತೆ ಬರಬೇಕು, ಇಲ್ಲವಾದರೆ ಫೋಟೊ ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ.
ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈತ ಆಕೆಗೆ ದಿನನಿತ್ಯ ವೀಡಿಯೊ ಕಾಲ್ ಮಾಡಿ ತೊಂದರೆ ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಇದೀಗ ಆರೋಪಿಯನ್ನು ಬೆಳ್ತಂಗಡಿಯ ದಕ್ಷ ಪೋಲೀಸ್ ಅಧಿಕಾರಿ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಮತ್ತವರ ತಂಡ ಪತ್ತೆ ಮಾಡಿ ಬೆಂಗಳೂರು ಪೋಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.