ಮಂಗಳೂರು: ಬೈಕಂಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಮೊಬೈಲ್ ಖರೀದಿ ಮಾಡಲು ಬಂದ ಯುವತಿಯ ಪರಿಚಯ ಬೆಳೆಸಿಕೊಂಡು ಹಿಂದೂ ಎಂದು ನಂಬಿಸಿ ಆಕೆಯನ್ನು ಆತನ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸಿ, ಅಷ್ಟೇ ಅಲ್ಲದೇ ಇಬ್ಬರ ಜೊತೆಗಿನ ಫೋಟೋಗಳನ್ನು ತೋರಿಸಿ ಮತಾಂತರವಾಗದಿದ್ದಲ್ಲಿ ಅತ್ಯಾಚಾರವೆಸಗುವುದಾಗಿ ಬೆದರಿಕೆಯೊಡ್ದಿದ ಎಂದು ಆರೋಪಿಸಿ ಯುವತಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ,
ಬಂಧಿತ ಆರೋಪಿಯನ್ನು ಕಿನ್ನಿಗೋಳಿಯ ಮುನ್ನ ಯಾನೆ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಇಬ್ರಾಹಿಂ
ಬೈಕಂಪಾಡಿಯ ಮೊಬೈಲ್ ಅಂಗಡಿಗೆ ಮೊಬೈಲ್ ಖರೀದಿಸಲು ಯುವತಿ ಹೋಗಿದ್ದು, ಈ ವೇಳೆ ಯುವಕ ಯುವತಿಯ ಪರಿಚಯ ಬೆಳೆಸಿಕೊಂಡಿದ್ದ. ಯುವಕ ತನ್ನ ನಿಜವಾದ ಹೆಸರನ್ನು ಮರೆಮಾಚಿ ಹಿಂದೂ ಎಂದು ತಿಳಿಸಿ, ಪ್ರೀತಿಯ ನಾಟಕವಾಡಿ ಆತನ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸಿ, ಅಷ್ಟೇ ಅಲ್ಲದೇ ಇಬ್ಬರ ಜೊತೆಗಿನ ಫೋಟೋಗಳನ್ನು ತೋರಿಸಿ ಮತಾಂತರವಾಗದಿದ್ದಲ್ಲಿ ಅತ್ಯಾಚಾರವೆಸಗುವುದಾಗಿ ಬೆದರಿಕೆಯೊಡ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.