ಮಂಗಳೂರಿನ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಸಭಾಂಗಣದಲ್ಲಿ ತನ್ನ ಸ್ವಾರ್ಥಕ್ಕಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಭವ್ಯ ಅಪೂರ್ವ ದೇವಸ್ಥಾನ ವನ್ನು ನಿರ್ಮಿಸಿದ ಕ್ಷೇತ್ರಾಡಳಿತ ಸಮಿತಿಯ ನ್ನು ಕ್ಷೇತ್ರ ಕ್ಕೆ ಬರದಂತೆ ತಡೆಯಲು ಶ್ರೀಧರ ಪೂಜಾರಿ ಯವರು ನಡೆಸುತ್ತಿರುವ ಹುನ್ನಾರದ ಬಗ್ಗೆ ಶ್ರೀ ಕ್ಷೇತ್ರದ ಭಕ್ತರು ಒಟ್ಟು ಸೇರಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸತ್ಯ ಧರ್ಮದ ಮಣ್ಣು ಗೆಜ್ಜೆಗಿರಿಯ ಪಾವಿತ್ರ್ಯತೆ ಮತ್ತು ಭಾವನೆಗಳಿಗೆ ತೊಂದರೆ ಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ವಿಶ್ವದ ತುಂಬೆಲ್ಲ ನೆಲೆಸಿರುವ ಸಮಸ್ತ ಬಿಲ್ಲವರ ಪ್ರಾತಿನಿಧಿಕ ಸಂಸ್ಥೆ. ಪ್ರಪಂಚದ ಎಲ್ಲಾ ಕಡೆಯ ಬಿಲ್ಲವರು ಒಟ್ಟು ಸೇರಿ ರಚಿಸಿದ ಸಂಸ್ಥೆ, ಈ ಸಂಸ್ಥೆ ‘ಗೆಜ್ಜೆಗಿರಿ’ ಎಂಬ ಅಪೂರ್ವ ದೇವಸ್ಥಾನದ ನಿರ್ಮಾಣವನ್ನು ಸಮಸ್ತ ಬಿಲ್ಲವರ ಹಾಗೂ ಭಕ್ತರ ಸಹಯೋಗದಿಂದ ನಡೆಸಿದೆ.
ಇಂತಹ ಪ್ರಾತಿನಿಧಿಕ ಸಂಸ್ಥೆ ಶ್ರೀಧರ ಪೂಜಾರಿಯವರು ಭಕ್ತರು ಹುಂಡಿಗೆ ಹಾಕಿದ ಹಣವನ್ನು ಸಮಿತಿಯ ಗಮನಕ್ಕೆ ತರದೆ ತೆಗೆದು ತನ್ನ ಸ್ವಾರ್ಥಕ್ಕೆ ಉಪಯೋಗಿಸುವುದನ್ನು ಆಕ್ಷೇಪಿಸಿ ಕ್ಷೇತ್ರಾಡಳಿತ ಸಮಿತಿ ಆಡಳಿತಾತ್ಮಕ ಕ್ರಮ ತೆಗೆದು ಕೊಂಡರೆ ಅದನ್ನು ದಬ್ಬಾಳಿಕೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಸಮಿತಿ ಯಾರ ಮೇಲೂ ದಬ್ಬಾಳಿಕೆ ನಡೆಸಿಲ್ಲ. ಶ್ರೀಧರ ಪೂಜಾರಿಯವರು ಸ್ವತಃ ತಾವೇ ಕ್ಷೇತ್ರಾಡಳಿತ ಸಮಿತಿಯ ಮೇಲೆ ನಿರ್ಬಂಧ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.ಶ್ರೀಧರ ಪೂಜಾರಿಯವರು ಹಲವಾರು ಕಡೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯವರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ನಿರ್ಮಾಣಕ್ಕಾಗಿ ನಡೆಸಿದ ಸಭೆಗಳಲ್ಲಿ ನಾನು ಸಮಾಜಕ್ಕೆ ಜಾಗವನ್ನು ಬ್ರಹ್ಮಕಲಶೋತ್ಸವದ ನಂತರ ಹಸ್ತಾಂತರ ಮಾಡುತ್ತೇನೆ ಹೇಳಿದ್ದಾರೆ ಹಾಗೂ
ಶ್ರದ್ಧಾಕೇಂದ್ರ ವಾ ದೈವಸ್ಥಾನದ ನಿರ್ಮಾಣಕ್ಕೆ ಪ್ರತಿಫಲರಹಿತವಾಗಿ ಜಮೀನಿನ ಸಂಪೂರ್ಣ ಒಡೆತನದ ಹಕ್ಕನ್ನು ಕ್ಷೇತ್ರಾಡಳಿತ ಸಮಿತಿಗೆ ಹಸ್ತಾಂತರಿಸುವ ಕರಾರು ಪತ್ರಕ್ಕೆ ಸಹಿ ಮಾಡಿ ಬ್ರಹ್ಮಕಲಶೋತ್ಸವ ನಂತರ ಜಮೀನನ್ನು ಹಸ್ತಾಂತರಿಸದೆ ದಿನವನ್ನು ಮುಂದೂಡುತಿದ್ದು ಸುಳ್ಳಿನ ಮೇಲೆ ಸುಳ್ಳು ಹೇಳುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.
ಶ್ರೀಧರ ಪೂಜಾರಿ ಯವರು ಕೂಡ ಕ್ಷೇತ್ರಾಡ ಳಿತ ಸಮಿತಿಯ ಓರ್ವ ಸದಸ್ಯರಾಗಿದ್ದು ಈಗ ಕ್ಷೇತ್ರಾಡಳಿತ ಸಮಿತಿ ಸರಿಯಾಗಿಲ್ಲ ಎಂದು ಹೇಳುತ್ತಿರುವುದು ದುರುದ್ಧೇಶದಿಂದ. ಕ್ಷೇತ್ರಾಡಳಿತ ಸಮಿತಿಯ ಉದ್ಧೇಶ ‘ಗೆಜ್ಜೆಗಿರಿ’ ಪಾವಿತ್ರ್ಯತೆ ಉಳಿಸಿ ಭಕ್ತರ ಭಾವನೆಗೆ ಸ್ಪಂದಿಸುವುದಾಗಿದೆ. ಆದುದರಿಂದ ಸಮಾಜ ಒಗ್ಗಟ್ಟಿನಿಂದ ಸತ್ಯ ಧರ್ಮಕ್ಕಾಗಿ ಕೆಲಸಮಾಡಬೇಕಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಈ ಸಭೆಯಲ್ಲಿ ಶ್ರೀ ಕ್ಷೇತ್ರದ ಭಕ್ತರುಗಳಾದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ರಾಜಾರಾಮ್, ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮುಕೇಸ್ತರಾದ ದಿನೇಶ್ ಅಂಚನ್, ಬಿಲ್ಲವ ಸಂಘದ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಕಾರ್ಪೊರೇಟರ್ ಗಳಾದ ಅನಿಲ್ ಪಂಜಿಮುಗೇರ್ ಮತ್ತು ಸಂದೀಪ್ ಗರೋಡಿ, ಪ್ರಮುಖರರಾದ ಸುನಿಲ್ ಕುಮಾರ್ ಬಜಾಲ್, ಹರೀಶ್ ಕೆ ಪೂಜಾರಿ, ರಾಜೇಂದ್ರ ಚಿಲಿಂಬಿ, ರವೀಂದ್ರ ಬಂಗೇರ, ಪ್ರಕಾಶ್ ಪೂಜಾರಿ ಕಟಪಾಡಿ, ಪ್ರಕಾಶ್ ನಾರವಿ, ನಿತ್ಯಾನಂದ ನಾವರ, ಜಯರಾಮ್ ಬಂಗೇರ, ಹರೀಶ್ ಕೊಣಾಜೆ, ಹರೀಶ್ ಅಡ್ಯಾರ್, ಪ್ರೇಮನಾಥ್ ಬಂಟ್ವಾಳ,ಲೊಕೇಶ್ ಬಿ.ಸಿ. ರೋಡ್, ದಿನಕರ್ ಜಿ ಬಂಗೇರ, ಪ್ರವೀಣ್ ಅಂಚನ್ ಆರ್ಕುಳ, ರಕ್ಷಿತ್ ಕೆ, ಹರೀಶ್ ಪೂಜಾರಿ ಹೊಸ್ಮಾರ್, ಪ್ರಕಾಶ್ ಪೂಜಾರಿ ಡೊಂಕರ ಬೆಟ್ಟು, ಹಾಗೂ ಬಿಲ್ಲವರ ಮಹಾಮಂಡಲ ಪಧಧಿಕಾರಿಗಳು, ಬಿಲ್ಲವ ಸಂಘಟನೆ, ಗರೋಡಿ, ಗೋಕರ್ಣನಾಥ ಸೇವಾದಳ ಪ್ರಮುಖರು ಭಾಗವಹಿಸಿ ಶ್ರೀಧರ ಪೂಜಾರಿಯ ಸ್ವಾರ್ಥ ಮತ್ತು ಅಪ್ರಮಾಣಿಕತೆ ಗೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.