ಪುತ್ತೂರು: ಪುತ್ತೂರು ತಾಲೂಕಿನ 22 ಗ್ರಾಮಪಂಚಾಯತ್ ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಮೀಸಲಾತಿ ಪ್ರಕಟಗೊಂಡಿದೆ. ದ.ಕ. ಜಿಲ್ಲಾಧಿಕಾರಿಡಾ.ರಾಜೇಂದ್ರ ಕೆ.ವಿ. ಮತ್ತು ಅಪರ ಜಿಲ್ಲಾಧಿಕಾರಿರೂಪರವರ ಮಾರ್ಗದರ್ಶನದಲ್ಲಿ ಪುತ್ತೂರು ಸಹಾಯಕಆಯುಕ್ತ ಡಾ.ಯತೀಶ್ ಉಳ್ಳಾಲ್ ಹಾಗೂ ತಹಶೀಲ್ದಾರ್ರಮೇಶ್ ಬಾಬುರವರು ಪುರಭವನದಲ್ಲಿ ಮೀಸಲಾತಿನಿಗದಿ ಪ್ರಕ್ರಿಯೆ ನಡೆಸಿದರು. ಜ.27ರಂದು ಬೆಳ್ತಂಗಡಿತಾಲೂಕಿನ 46 ಮತ್ತು ಸುಳ್ಯ ತಾಲೂಕಿನ 25 ಗ್ರಾಮಪಂಚಾಯತ್ ಹಾಗೂ ಜ.28ರಂದು ಬೆಳಿಗ್ಗೆ ಕಡಬತಾಲೂಕು ವ್ಯಾಪ್ತಿಯ 21 ಗ್ರಾಮ ಪಂಚಾಯತ್ ಗಳಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪ್ರಕ್ರಿಯೆಪುರಭವನದಲ್ಲಿ ನಡೆದಿತ್ತು. ಜ.28ರಂದು ಅಪರಾಹ್ನಪುತ್ತೂರು ತಾಲೂಕು ವ್ಯಾಪ್ತಿಯ 22 ಗ್ರಾಮ ಪಂಚಾಯತ್ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿನಿಗದಿ ಜರಗಿತು. ದ.27ರಂದು ಗ್ರಾ.ಪಂ. ಚುನಾವಣೆನಡೆದಿದ್ದು ದ.30ರಂದು ಫಲಿತಾಂಶ ಪ್ರಕಟಗೊಂಡಿತ್ತು.ಐದು ವರ್ಷಗಳ ಆಡಳಿತ ಅವಧಿ ಇರುವ ಗ್ರಾಮಪಂಚಾಯತ್ ಗಳ ಮೊದಲ ಎರಡೂವರೆ ವರ್ಷದಅವಧಿಗೆ ಇದೀಗ ಮೀಸಲಾತಿ ನಿಗದಿ ಪಡಿಸಲಾಗಿದೆ. ಇನ್ನುಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯತ್ ಗಳಲ್ಲಿ ನೂತನಆಡಳಿತ ಅಸ್ತಿತ್ವಕ್ಕೆ ಬರಲಿದೆ.