ವಿಟ್ಲ: ವ್ಯಕ್ತಿಯೋರ್ವರ ಮೃತದೇಹ ವಿಟ್ಲ ಅರಮನೆ ರಸ್ತೆಯಲ್ಲಿರುವ ಬಿಲ್ಡಿಂಗ್ ವೊಂದರ ವಿದ್ಯುತ್ ಕಂಟ್ರೋಲ್ ರೂಮ್ ನಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಮಾರಪ್ಪ ಎಂದು ಗುರುತಿಸಲಾಗಿದೆ.
ಇವರು ಬಹುತೇಕವಾಗಿ ಕುಡಿತದ ಅಮಲಿನಲ್ಲಿಯೇ ಇರುತ್ತಿದ್ದು, ಈತನ ಶವ ಬಿಲ್ಡಿಂಗ್ ನ ವಿದ್ಯುತ್ ಕಂಟ್ರೋಲ್ ರೂಮ್ ನಲ್ಲಿ ಪತ್ತೆಯಾಗಿದೆ.
ವಿದ್ಯುತ್ ಕಂಟ್ರೋಲ್ ರೂಮ್ ನ ಕೆಲ ಫ್ಯೂಸ್ ಗಳು ತೆಗೆದ ರೀತಿಯಲ್ಲಿದ್ದು, ಈತ ಫ್ಯೂಸ್ ತೆಗೆಯಲು ಪ್ರಯತ್ನಿಸಿ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತ ಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ವಿಟ್ಲ ಮೆಸ್ಕಾಂ ಸಿಬ್ಬಂದಿಗಳು ಹಾಗೂ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.