ಪುತ್ತೂರು: 2000 ಇಸವಿಯಲ್ಲಿ ಆರಂಭಗೊಂಡ ಎಸ್.ಆರ್.ಕೆ. ಸಂಸ್ಥೆ 2015 ರಿಂದ ಬೈಪಾಸ್ ಸರ್ಕಲ್‌ನ ಹತ್ತಿರ ಮುಖ್ಯ ರಸ್ತೆಯಲ್ಲಿ ಎಸ್.ಆರ್.ಕೆ ಅಲ್ಯುಮಿನಿಯಂ & ಫೈಬರ್ ಎಂದು ಕಾರ್ಯಾಚರಿಸುತ್ತಿದೆ. ದೀಪಾವಳಿ ಪ್ರಯುಕ್ತ ಮಳಿಗೆಯಲ್ಲಿ ಗಣಹೋಮ ಹಾಗೂ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು.
ದೀಪಾವಳಿ ಪ್ರಯುಕ್ತ ಗಣಹೋಮ ಹಾಗು ಲಕ್ಷ್ಮೀ ಪೂಜೆಯನ್ನು ಕೆಮ್ಮಿಂಜೆ ಸುಬ್ರಮಣ್ಯ ದೇವಸ್ಥಾನದ ಅರ್ಚಕ ಕೃಷ್ಣಭಟ್‌ರವರು ನೆರವೇರಿಸಿಕೊಟ್ಟರು. ನಂತರ ಸಂಸ್ಥೆಯ ಮಾಲಕ ಸದಾಶಿವ ಭಟ್ ಮತ್ತು ಶಾಲಿನಿ ಯವರನ್ನು ಸಂಸ್ಥೆಯ ಸಿಬ್ಬಂದಿ ವರ್ಗದವರು ಶಾಲು ಹೊದಿಸಿ, ಫಲ-ಪುಷ್ಪವನ್ನು ನೀಡಿ ಧನ್ಯತಾಭಾವವನ್ನು ತನ್ಮೂಲಕ ಪ್ರಕಟಿಸಿದರು.
ಅತಿಥಿಗಳಾಗಿ ಬೊಳುವಾರಿನ ವೇಣುಗೋಪಾಲ್ ಮಣಿಯಾಣಿ, ಆಂಜನೇಯ ಮಂತ್ರಾಲಯ ವಸಂತ ಶೇವಿರೆ, ಕೃಷ್ಣ , ನಿತಿನ್ ಮಂಜಲ್ಪಡ್ಪು, ಪ್ರಶಾಂತ್ ಮುರ, ಜಯರಾಜ್ ಅಂಜಳ ಆಗಮಿಸಿದ್ದರು. ಮಾಲೀಕರಾದ ಸದಾಶಿವ ಭಟ್, ಶಾಲಿನಿ ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂಸ್ಥೆಯಲ್ಲಿ ಕೃಷಿ ಉಪಯೋಗಿ ಅಲ್ಯುಮಿನಿಯಂ ಏಣಿಗಳು, ಕೈ ಗಾಡಿಗಳು, ಅಲ್ಯುಮಿನಿಯಂ ದೋಂಟಿ, ಸ್ಟ್ರೇಯರ್ ಗಳು ಅಲ್ಲದೇ ಗೃಹಪಯೋಗಿ ವಸ್ತುಗಳು ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಸಾಮಾಗ್ರಿಗಳು, ಪಿವಿಸಿ ಸೀಲಿಂಗ್ ಸೀಟುಗಳು, ಫೈಬರ್ ಬಾಗಿಲುಗಳು ಜನರಿಗೆ ಕೈಗೆಟಕುವಂತೆ ಸದಾ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.