ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನ. 19 ರಿಂದ ವರ್ಷಾವಧಿ ಉತ್ಸವಗಳು ಪೂರ್ವಸಂಪ್ರದಾಯ ಪ್ರಕಾರ ನಡೆಯಲಿದ್ದು, ದೇವಾಲಯದಲ್ಲಿ ಭರದ ಸಿದ್ದತೆ ನಡೆದಿದೆ. ನ. 14 ರಂದು ಊರ ಪರವೂರ ಭಕ್ತರಿಂದ ಸ್ವಚ್ಛತಾ ಶ್ರಮದಾನ ನಡೆಯಿತು.
ದೇವಳದಲ್ಲಿ ಅನ್ನಛತ್ರ ಮತ್ತು ಸಭಾಂಗಣ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಕೊರೊನಾದಿಂದಾಗಿ ಎರಡು ವರ್ಷಗಳ ಬಳಿಕ ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಜಾತ್ರೋತ್ಸವ ಭಾರೀ ವಿಶೇಷತೆ ಪಡೆದುಕೊಂಡಿದ್ದು, ಭಕ್ತರು ಶ್ರಮದಾನ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಕಂಡುಬಂದಿತು.