ಪುತ್ತೂರು : ವಾರದ ಹಿಂದಷ್ಟೇ ಸರಣಿ ಕಳ್ಳತನದಿಂದ ಹೈರಾಣಾಗಿದ್ದ ನೆಲ್ಯಾಡಿಯಲ್ಲಿ ಇಂದು ಮತ್ತೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ತಡರಾತ್ರಿ ವೇಳೆ ನೆಲ್ಯಾಡಿಯಲ್ಲಿರುವ ಗುಜರಿ ಅಂಗಡಿಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಸ್ವತ್ತು ಗಳನ್ನು ಕಳವುಗೈದಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದವರು ಸ್ಥಳಕ್ಕಾಗಮಿಸಿದ ವೇಳೆ ಪಿಕಪ್ ವಾಹನದಲ್ಲಿ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನೆಲ್ಯಾಡಿ ಪೋಲಿಸ್ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.