ಪುತ್ತೂರು: ಅನ್ಯಕೋಮಿನ ಮಹಿಳೆಯ ಮೇಲೆ ಕೈ ಹಾಕಿದ್ದಾನೆ ಎಂದು ಆರೋಪಿಸಿ ಹಿಂದೂ ಯುವಕನೊಬ್ಬನಿಗೆ ಸಾರ್ವಜನಿಕವಾಗಿ ಥಳಿಸಿದ ಘಟನೆ ಪುತ್ತೂರು ಸವಣೂರು ರಸ್ತೆಯ ಮರೀಲ್ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಬೆದ್ರಾಳ ಕಡೆಯಿಂದ ಪುತ್ತೂರು ನಗರಕ್ಕೆ ಬರುವ ಸರ್ವೀಸ್ ಆಟೋ ದಲ್ಲಿ ಮಹಿಳೆಯೊಬ್ಬರು, ಮಕ್ಕಳು ಹಾಗೂ ಯುವಕ ಪ್ರಯಾಣಿಸುತ್ತಿದ್ದು, ಆಟೋ ಮರೀಲ್ ಬಳಿ ಬರುತ್ತಿದ್ದಂತೆ ಯುವಕ ಮಹಿಳೆಯ ಮೇಲೆ ಕೈ ಹಾಕಿದ್ದಾನೆ ಎಂದು ಆರೋಪಿಸಿ ಸ್ಥಳೀಯ ಕೆಲ ಯುವಕರು ಅವನನ್ನು ಹಿಡಿದು ಆತನನ್ನು ಥಳಿಸಿದ್ದಾರೆಂದು ತಿಳಿದು ಬಂದಿದೆ.
ಈ ಸಂದರ್ಭ ಜನ ಜಮಾಯಿಸಿದ್ದು, ನಂತರದ ಬೆಳವಣಿಗೆಯಲ್ಲಿ ಕೆಲ ಸ್ಥಳೀಯರು ಯುವಕನನ್ನು ಅಲ್ಲಿಂದ ಆಟೋ ಮೂಲಕ ಪುತ್ತೂರು ನಗರ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ..