ಸುರತ್ಕಲ್: ಸುರತ್ಕಲ್ ಬೀಚ್ ಗೆ ಬಂದಿದ್ದ ಅನ್ಯಮತೀಯ ಜೋಡಿಯನ್ನು ಗಮನಿಸಿದ ಸುರತ್ಕಲ್ ಬಜರಂಗದಳದ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ಜೋಡಿ ತಪ್ಪಿಸಿಕೊಂಡು ಪರಾರಿಯಾದರೆ, ಅಲ್ಲಿದ್ದ ಇನ್ನೋರ್ವ ಯುವಕ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದು ಆತನನ್ನು ಸುರತ್ಕಲ್ ಠಾಣೆಗೆ ಒಪ್ಪಿಸಿದ ಘಟನೆ ನ .19 ರ ಶುಕ್ರವಾರ ನಡೆದಿದೆ.
ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ ಹುಬ್ಬಳ್ಳಿ ಮೂಲದ ಹಿಂದೂ ಯುವತಿಯೊಬ್ಬಳನ್ನು ಕುದ್ರೋಳಿ ಮೂಲದ ಮುಸ್ಲಿಂ ಯುವಕ ಪುಸಲಾಯಿಸಿ ತನ್ನ ಸ್ನೇಹಿತನ ಜತೆಗೂಡಿ ಬೀಚಿಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.ಮಾಹಿತಿ ಪಡೆದ ಕಾರ್ಯಕರ್ತರು ವಿಚಾರಿಸಲು ಮುಂದಾದಾಗ ಜೋಡಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಅನ್ಯಕೋಮಿನ ಯುವಕನ ಸ್ನೇಹಿತ ಸಿಕ್ಕಿ ಬಿದ್ದಿದ್ದು ಆತನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಅನ್ಯಕೋಮಿನ ಯುವಕನನ್ನು ಮೆಹಬೂಬ್ ಎಂದು ಗುರುತಿಸಲಾಗಿದೆ.
ಪೊಲೀಸರು ತಪ್ಪಿಸಿಕೊಂಡ ಯುವಕನ ಹುಡುಕಾಟ ನಡೆಸಿದ್ದಾರೆ . ಆಸೆ ಆಮಿಷಗಳನ್ನು ಒಡ್ಡಿ ಯುವತಿಯನ್ನು ಕರೆ ತರಲಾಗಿದ್ದು ಇದು ಲವ್ ಜಿಹಾದ್ ಭಾಗವಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ರ ತನಿಖೆ ನಡೆಸದಿದ್ದಲ್ಲಿ ಉಗ್ರ ಹೋರಾಟ ನಡೆಸಲೇಕಾಗುತ್ತದೆ ಎಂದು ಬಜರಂಗದಳ ಎಚ್ಚರಿಸಿದೆ.ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.