ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಗಳೂರು-ಬಿ.ಸಿ.ರೋಡ್ ನಡುವಿನ ಫರಂಗಿಪೇಟೆ ಸಮೀಪದ ಅರ್ಕುಳದಲ್ಲಿ ನಡೆದಿದೆ.
ಮೃತ ಸವಾರನನ್ನು ವಿಟ್ಲ ಸಮೀಪದ ಕೇಪು ಗ್ರಾಮದ ನೀರ್ಕಜೆ ನಿವಾಸಿ ಬಾಬು ನಾಯ್ಕರ ಪುತ್ರ ಪ್ರಜ್ವಲ್(26) ಎನ್ನಲಾಗಿದೆ.
ಪ್ರಜ್ವಲ್ ಮಂಗಳೂರಿನ NMPT ಉದ್ಯೋಗಿಯಾಗಿದ್ದು, ಕೆಲಸದ ನಿಮಿತ್ತ ಕಂಪನಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಪ್ರಜ್ವಲ್ ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ..