ಕಾವು: ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾವು ಇದರ 2021-2022 ರ ಸಾಲಿನ ಮಹಾಸಭೆ, ಲೆಕ್ಕಪತ್ರ ಮಂಡನೆ,ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಕಾವು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮುಡಿತ್ತಾಯ ಇವರ ಅಧ್ಯಕ್ಷತೆಯಲ್ಲಿ ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವಠಾರದಲ್ಲಿ ನ. 21 ರಂದು ನಡೆಯಿತು.
2021-2022ನೇ ಸಾಲಿನ ಆಯವ್ಯಯ ಲೆಕ್ಕಪತ್ರವನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ನವೀನ್ ನನ್ಯ ಪಟ್ಟಾಜೆ ಮಂಡಿಸಿದರು. ನಂತರ ಸಭೆಯ ಅನುಮೋದನೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ,ಸಮಿತಿಯ ಗೌರವ ಸಲಹೆಗಾರರಾದ ಚಂದ್ರಶೇಖರ ರಾವ್ ನಿಧಿಮುಂಡ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ:
ಸುಮಾರು 38 ವರ್ಷಗಳಿಂದ ಗಣೇಶೋತ್ಸವ ಆಚರಣೆ ಮಾಡುತ್ತಿರುವ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾವು ಇದರ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇದೇ ಸಂದರ್ಭದಲ್ಲಿ ನಡೆಯಿತು.ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನವೀನ್ ನನ್ಯ ಪಟ್ಟಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ್ ಗೌಡ ಮಂಜಲ್ತಡ್ಕ, ಜೊತೆ ಕಾರ್ಯದರ್ಶಿಯಾಗಿ ರಾಮಣ್ಣ ನಾಯ್ಕ ಆಚಾರಿಮೂಲೆ, ಕೋಶಾಧಿಕಾರಿ ಯಾಗಿ ಕೃಷ್ಣ ಪ್ರಸಾದ್ ಕೊಚ್ಚಿ ಆಯ್ಕೆಯಾದರು.
ಅಧಿಕಾರ ಹಸ್ತಾಂತರ ಕಾರ್ಯಕ್ರಮ:
ಶ್ರೀ ಗಣೇಶೋತ್ಸವ ಸಮಿತಿಯ ನಿರ್ಗಮಿತ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಸಮಿತಿಯ ನಿರ್ಣಯ ಪುಸ್ತಕ ನೀಡುವ ಮೂಲಕ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಸುಮಾರು ಎರಡು ಅವಧಿಗಳ ಕಾಲ ಅಧ್ಯಕ್ಷರಾಗಿದ್ದ ನಿರ್ಗಮಿತ ಅಧ್ಯಕ್ಷ ಲೋಕೇಶ್ ಚಾಕೋಟೆ ಮಾತನಾಡಿ ಅಧ್ಯಕ್ಷೀಯ ಅವಧಿಯಲ್ಲಿ ಕಾರ್ಯಕ್ರಮಗಳ ಯಶಸ್ವಿಗೆ ಸಹಕರಿಸಿದ ಸಮಿತಿಯ ಪದಾಧಿಕಾರಿಗಳಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಮತ್ತು ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರದ ಚಂದ್ರಶೇಖರ ರಾವ್ ನಿಧಿಮುಂಡ ನೂತನ ಪದಾಧಿಕಾರಿಗಳಿಗೆ ಹಾಗೂ ನಿರ್ಗಮಿತ ಪದಾಧಿಕಾರಿಗಳಿಗೆ ಅಭಿನಂದನೆ ಮಾತನಾಡಿದರು. ನೂತನ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ ಮುಂದಿನ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಚಾಕೋಟೆ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಗೌಡ ಮಂಜಲ್ತಡ್ಕ ವಂದಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಚಂದ್ರಶೇಖರ ಪಾಟಾಳಿ ಪಟ್ಟುಮೂಲೆ, ನಾರಾಯಣ ಆಚಾರ್ಯ ಮಳಿ,ಸುಂದರ ಪೂಜಾರಿ ಕೆರೆಮಾರು, ದಿವ್ಯಪ್ರಸಾದ್ ಎ. ಯಂ,ಸಂಕಪ್ಪ ಪೂಜಾರಿ ಚಾಕೋಟೆ, ಧನಂಜಯ ನಾಯ್ಕ ಕುಂಞಕುಮೇರು ಐತಪ್ಪ ಗೌಡ ಪಳನೀರು, ಶಿವಪ್ಪ ನಾಯ್ಕ, ಶೇಷಪ್ಪ ನಾಯ್ಕ,ರವಿಕಿರಣ್ ಕಾವು,ಜಗನ್ನಿವಾಸ ಗೌಡ ನಿಧಿಮುಂಡ, ನಾರಾಯಣ ಮುಖಾರಿ,ಚಂದ್ರಶೇಖರ, ಎಂ ಎ ಶಿವಕುಮಾರ್ ಮಾಣಿಯಡ್ಕ, ಕೃಷ್ಣಪ್ಪ ನಾಯ್ಕ,ವಿಶ್ವನಾಥ ಕುಲಾಲ್, ಸೀತಾರಾಮ ಬಿ, ವಿಶ್ವ ನಾಥ ಕೆ ಉಪಸ್ಥಿತರಿದ್ದರು.
ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಮತ್ತು ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರದ ಚಂದ್ರಶೇಖರ ರಾವ್ ನಿಧಿಮುಂಡ ನೂತನ ಪದಾಧಿಕಾರಿಗಳಿಗೆ ಹಾಗೂ ನಿರ್ಗಮಿತ ಪದಾಧಿಕಾರಿಗಳಿಗೆ ಅಭಿನಂದನೆ ಮಾತನಾಡಿದರು. ನೂತನ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ ಮುಂದಿನ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಚಾಕೋಟೆ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಗೌಡ ಮಂಜಲ್ತಡ್ಕ ವಂದಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಚಂದ್ರಶೇಖರ ಪಾಟಾಳಿ ಪಟ್ಟುಮೂಲೆ, ನಾರಾಯಣ ಆಚಾರ್ಯ ಮಳಿ,ಸುಂದರ ಪೂಜಾರಿ ಕೆರೆಮಾರು, ದಿವ್ಯಪ್ರಸಾದ್ ಎ. ಯಂ,ಸಂಕಪ್ಪ ಪೂಜಾರಿ ಚಾಕೋಟೆ, ಧನಂಜಯ ನಾಯ್ಕ ಕುಂಞಕುಮೇರು ಐತಪ್ಪ ಗೌಡ ಪಳನೀರು, ಶಿವಪ್ಪ ನಾಯ್ಕ, ಶೇಷಪ್ಪ ನಾಯ್ಕ,ರವಿಕಿರಣ್ ಕಾವು,ಜಗನ್ನಿವಾಸ ಗೌಡ ನಿಧಿಮುಂಡ, ನಾರಾಯಣ ಮುಖಾರಿ,ಚಂದ್ರಶೇಖರ, ಎಂ ಎ ಶಿವಕುಮಾರ್ ಮಾಣಿಯಡ್ಕ, ಕೃಷ್ಣಪ್ಪ ನಾಯ್ಕ,ವಿಶ್ವನಾಥ ಕುಲಾಲ್,ಸೀತಾರಾಮ ಬಿ,ವಿಶ್ವ ನಾಥ ಕೆ ಉಪಸ್ಥಿತರಿದ್ದರು.