ಕಡಬ: ಹಿಂದೂ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಂ ಯುವಕರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸ್ ಠಾಣೆಯ ಮುಂದೆ ಜಮಾವಣೆಗೊಂಡ ಘಟನೆ ಕಡಬದಲ್ಲಿ ನಡೆದಿದೆ.
ಕೊಲೆ ಬೆದರಿಕೆ ಹಾಕಿದ ಯುವಕರನ್ನು ಬಂಧಿಸಬೇಕೆಂದು ಆಗ್ರಹಿಸಿ ಠಾಣೆಯ ಮುಂದೆ ಜಮಾಯಿಸಿದ್ದಾರೆ ಎಂದು ವರದಿಯಾಗಿದೆ.
ಮರ್ದಾಳದ ಹಿಂದೂ ಯುವಕರಿಬ್ಬರು ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ‘ಮರ್ದಾಳದ ಮುಸ್ಲಿಮರು ನಮ್ಮ ಸಮುದಾಯದ ಹುಡುಗಿಯರಿಗೆ ಕಣ್ಣು ಹಾಕಿದ್ರೆ ನಮಗೆ ಹೇಳಿ ನಾವು ನೋಡಿಕೊಳ್ಳುತ್ತೇವೆ, ನಮ್ಮ ಹುಡುಗಿಯರು ಮುಸ್ಲಿಂ ಯುವಕರ ಜೊತೆ ಕಾಂಟಾಕ್ಟ್ ಇಟ್ಟುಕೊಂದಿದ್ದರೆ ಹೇಳಿ ಅವರನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಸ್ಟೇಟಸ್ ಹಾಕಿಕೊಂಡಿದ್ದರೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಂ ಯುವಕರು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬ ಪೋಲಿಸ್ ಠಾಣೆಯ ಎದುರು ಜಮಾವಣೆಗೊಂಡಿದ್ದಾರೆ ಎನ್ನಲಾಗಿದೆ.
ಕೊಲೆ ಬೆದರಿಕೆ ಹಾಕಿರುವ ಯುವಕರನ್ನು ಬಂಧಿಸಬೇಕೆಂದು ಆಗ್ರಹಿಸಿ ಠಾಣೆಯ ಮುಂದೆ ಒಗ್ಗೂಡಿದ್ದಾರೆ ಎಂದು ತಿಳಿದು ಬಂದಿದೆ.




























