ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ನೀತಿ, ನ್ಯಾಯದ ಪರಿಪಾಠ ನಿರ್ವಹಿಸಬೇಕಾದ ಕಾಲೇಜು, ವಿದ್ಯಾಲಯಗಳು ಇಂದು ಅನೈತಿಕ, ಅಕ್ರಮಗೂಂಡಾಗಿಸಂ ನ ಅಡ್ಡೆಗಳಾಗುತ್ತಿದ್ದು ಮುಸ್ಲಿಂ ಸಮಾಜದ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಕೋಮು ಸೌಹಾರ್ಧತೆಗೆ ಮಾರಕವಾಗುತ್ತಿರುವ ಅತ್ಯಂತ ಭೀಕರ ಸನ್ನಿವೇಶ ಪುತ್ತೂರಿನಲ್ಲಿ ಸೃಷ್ಟಿಯಾಗಲಿದ್ದು ಸರಕಾರ ಈ ಬಗ್ಗೆ ಕೂಡಲೇ ಗಮನವಹಿಸಬೇಕು ಇಲ್ಲಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಮುಸ್ಲಿಂ ಸಮಾಜದ ವಿದ್ಯಾರ್ಥಿಯರನ್ನು ಟಾರ್ಗೆಟ್ ಮಾಡಲಾಗುತ್ತಿದ್ದು ಇದು ಖಂಡನೀಯವಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಹೇಳಿದೆ.
ಭಾತ್ರತ್ವಕ್ಕೆ ಹೆಸರುವಾಸಿಯಾಗಿದ್ದ ಪುತ್ತೂರು ಇದೀಗ ಕೋಮು ಗಲಭೆ ಸೃಷ್ಟಿಸುವ ಹುನ್ನಾರಕ್ಕೆ ಸಂಚು ಹೂಡುವ ಸಮಾಜ ದ್ರೋಹಿಗಳ ಕಬಂಧ ಬಾಹುಗಳಲ್ಲಿ ನಲುಗುತ್ತಿರುವುದು ಖೇದಕರವಾಗಿದೆ. ಮುಸ್ಲಿಂ ಸಮಾಜದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಇದು ವ್ಯವಸ್ಥಿತ ಪಿತೂರಿ ಆಗಿದ್ದು, ಇದರ ಹಿಂದಿನ ಕುಮ್ಮಕ್ಕು ನೀಡುವ ದುಷ್ಟ ಶಕ್ತಿಗಳನ್ನು ಬಯಲುಗೊಳಿಸಬೇಕು.
ಎಳೆ ಮುಗ್ಧ ಮನಸ್ಸಿನ ವಿದ್ಯಾರ್ಥಿಗಳಲ್ಲಿ ಕೋಮು ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯಲು ಯತ್ನಿಸಿ ಈ ಮೂಲಕ ಬೇಳೆ ಬೇಯಿಸುವ ಈ ಶಕ್ತಿಗಳ ಎಡೆಮುರಿ ಕಟ್ಟದಿದ್ದರೆ ಮುಂದೆ ಪುತ್ತೂರು ಅಶಾಂತಿಯ ಭಯಬೀತ ಕೇಂದ್ರವಾಗೋದರಲ್ಲಿ ಸಂಶಯವಿಲ್ಲ.
ದೈವ ಪವಿತ್ರತೆಯ ತ್ರಿಶೂಲವನ್ನು ಹಿಂಸಾತ್ಮಕ ಆಯುಧವನ್ನಾಗಿ ಪರಿವರ್ತಿಸಿ ಪವಿತ್ರತೆಯ ಸಂಕೇತವನ್ನು ಅಪವಿತ್ರಗೊಳಿಸಿ ಸಂಶಯಾತ್ಮಕ ದೃಷ್ಟಿಯಿಂದ ನೋಡುವಂತೆ ಮಾಡುವ ಇಂತಹ ಕೃತ್ಯವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ
ಅತ್ಯುಗ್ರವಾಗಿ ಖಂಡಿಸುತ್ತದೆ. ಅಧಿಕಾರಿಗಳು, ಕಾನೂನು ಪಾಲಕರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
- ಕಾಲೇಜು ವಿಧ್ಯಾರ್ಥಿಗಳೊಳಗೆ ಸಮಸ್ಯೆ ತಲೆದೋರಿದರೆ ಅದು ಉಲ್ಬಣವಾಗೋದಕ್ಕಿಂತ ಮುಂಚೆ ಸಂಬಂದಿಸಿದವರು ಆ ಸಮಸ್ಯೆಯ ಮೂಲವನ್ನು ಅರಿತು ಬಗೆಹರಿಸುವುದು.
- ಸಮಸ್ಯೆ ಪರಿಹಾರ ವಾಗದಿದ್ದಲ್ಲಿ ತಪ್ಪಿತಸ್ಥರ ಮೇಲೆ ಸಂಸ್ಥೆಯ ಆಡಳಿತ / ಸಿಬ್ಬಂದಿಗಳು ಪೊಲೀಸರಿಗೆ ಕಂಪ್ಲೇಂಟ್ ಕೊಡುವುದು.
- ಪೆನ್ನು ಪುಸ್ತಕ ಹಿಡಿದು ತಿರುಗಾಡಬೇಕಾದ ವಿದ್ಯಾರ್ಥಿಗಳು ಮಾರಕಾಯುಧ ಹಿಡಿದು ಅಲೆದಾಡೂವುದರ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು.
- ಪವಿತ್ರ ತ್ರಿಶೂಲ ದಂತಹ ದೈವ ಆರಾಧನೆಯ ಸಾಧನೆಗಳ ಪವಿತ್ರತೆಯನ್ನು ವಿದ್ಯಾರ್ಥಿಗಳು ದುರ್ಬಳಕೆ ಮಾಡದಂತೆ ಎಚ್ಚರ ವಹಿಸುವುದು.
- ತಪ್ಪಿತಸ್ತರ ಬಗ್ಗೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಮುಂದಾಗುವ ಮೂಲಕ ಹೊರಗಿನ ಸಂಘಶಕ್ತಿಗಳ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡದಿರುವುದು.
- ಅನಗತ್ಯ ಆಗಿಂದ್ದಾಗೆ ಅಶಾಂತಿಗೆ ಕುಮ್ಮಕ್ಕು ನೀಡಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಿ ಸಂಸ್ಥೆಯ ಸುಲಲಿ ಮುನ್ನಡೆಗೆ ಶ್ರಮಿಸುವುದು.
- ಸರಕಾರಿ ಆಗಲಿ ಖಾಸಗಿ ಆಗಲಿ ಯಾವುದೇ ವಿದ್ಯಾಲಯಗಳು ಧರ್ಮದ ಆಧಾರದಲ್ಲಿ ವಿದ್ಯಾರ್ಥಿಗಳ ಮನ ಒಡೆಯುವ ಕೆಲಸಕ್ಕೆ ಮುಂದಾಗದೆ ಸರ್ವ ಧರ್ಮೀಯರಿಗೂ ಸಮಪಾಲು ಎಂಬ ಧೈಯದಂತೆ ಒಂದಾಗಿ ಕಾಣುವುದು.
- ಯಾವುದೇ ವಿದ್ಯಾರ್ಥಿಗಳ ನಡತೆಯ ಬಗ್ಗೆ ಅತೃಪ್ತಿ ಇದ್ದಲ್ಲಿ ಪೋಷಕರನ್ನು ಕರೆದು ತಪ್ಪನ್ನು ಮನವರಿಕೆ ಮಾಡಿಕೊಡುವುದು. ಅಥವಾ ಸಮಾಜದ ಗಣ್ಯ ವ್ಯಕ್ತಿಗಳ ಗಮನಕ್ಕೆ ತರಲು ಮುಂದಾಗುವುದು. ಈ ರೀತಿಯ ಬೇಡಿಕೆಗಳನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಮನವಿಯಲ್ಲಿ ತಿಳಿಸಿದೆ..