ಕಡಬ: ತಾಯಿಗೆ ಬೈಕ್‌ನಿಂದ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗ ದಯಾನಂದ್ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂತೂರು ಗ್ರಾಮದ ಬೀರಂತಡ್ಕ ನಿವಾಸಿ ಪುಷ್ಪಾವತಿ ಗಾಯಗೊಂಡವರು.
ಘಟನೆ ವಿವರ: ಪುಷ್ಪಾವತಿ ಅವರ ಪುತ್ರಿ, ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ನಿವಾಸಿ ಚೇತನಾ ಬಿ. ದೂರು ನೀಡಿದವರು.
ಏ.4ರಂದು ಸಂಜೆ ತನ್ನ ಅಣ್ಣ ದಯಾನಂದ್ ತಾಯಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಜ್ಜಿಯನ್ನು ನೋಡಲು ಹೊರಟಿದ್ದರು. ಮನೆಯಿಂದ ಸುಮಾರು ನೂರು ಅಡಿ ದೂರದ ಇಳಿಜಾರು ರಸ್ತೆಯಲ್ಲಿ ತಾಯಿಯನ್ನು ಬೈಕಿನಿಂದ ಕೆಳಗಿಳಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗುವಂತೆ ದಯಾನಂದ್ ತಿಳಿಸಿದ್ದು, ಬಳಿಕ ನಡೆದುಕೊಂಡು ಹೋಗುತ್ತಿದ್ದ ತಾಯಿಯ ಮೇಲೆ ಬೈಕನ್ನು ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ತೀವ್ರತೆಗೆ ತಾಯಿಯ ತಲೆ ಮತ್ತು ಎದೆ ಭಾಗಕ್ಕೆ ಗಾಯವಾಗಿದೆ ಎಂದು ಚೇತನಾರವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























