ಪುತ್ತೂರು:ವ್ಯಕ್ತಿಯೊಬ್ಬರು ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.29ರಂದು ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲದ ಗುಡ್ಡೆಯಲ್ಲಿ ಬೆಳಕಿಗೆ ಬಂದಿದೆ.
ಮೇನಾಲ ಜಲಧರ ಕಾಲನಿ ಚೋಮ ಎಂಬವರ ಪುತ್ರ ಕೊರಗಪ್ಪ ಯಾನೆ ಗೋಪಾಲ(42ವ.)ರವರು ಮೃತಪಟ್ಟವರು.
ಅವರು ಜು.24ರಂದು ಮನೆಯಿಂದ ನಾಪತ್ತೆಯಾಗಿದ್ದ ಕುರಿತು ಸಹೋದರ ರಾಮ ಅವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.ಜು.28ರಂದು ಮೇನಾಲ ಕಾಡಿನಲ್ಲಿ ಹುಡುಕುತ್ತಿರುವ ಸಂದರ್ಭ, ವಿಜಯ್ ಕುಮಾರ್ ಶೆಟ್ಟಿ ಎಂಬವರಿಗೆ ಸೇರಿದ ಜಾಗದಲ್ಲಿ ಗೋಪಾಲ ಯಾನೆ ಕೊರಗಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಮೃತರು ಸಹೋದರ ರಾಮ, ತಾಯಿ ಮುದರು ಅವರನ್ನು ಅಗಲಿದ್ದಾರೆ. ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























