ಪುತ್ತೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ದರ್ಬೆ ಕಾವೇರಿಕಟ್ಟೆ ರಸ್ತೆಯ ಹಿತ ಆಸ್ಪತ್ರೆಯ ಬಳಿ ನಡೆದಿದೆ.
ಘಟನೆ ಪರಿಣಾಮ ಬೈಕ್ ಸವಾರ ನೆಲ್ಲಿಕಟ್ಟೆ ನಿವಾಸಿ ಮಂಜು ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



























