ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಗಳ ಕೆಲವರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಒಕ್ಕೂಟದ ಕಾರ್ಯಕರ್ತರು ಕೂಡ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು, ಸರಿಯಾದ ರೀತಿಯ ತನಿಖೆಗೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಾಬಿರ್ ಅರಿಯಡ್ಕ, ‘ಕಾಲೇಜಿನಲ್ಲಿ ನಡೆದಂತಹ ಹಲ್ಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಎರಡು ಕಡೆ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜೆಜೆ ಕಾಯ್ದೆ ಪ್ರಕಾರ ಅವರನ್ನು ಕೌನ್ಸಿಲಿಂಗ್ ಗಾಗಿ ಮಂಗಳೂರಿಗೆ ಕಳುಸಿದ್ದು, ಪೊಲೀಸ್ ಇಲಾಖೆ ಸಂಪೂರ್ಣವಾದಂತಹ ತನಿಖೆ ಮಾಡಬೇಕು. ಯಾರೂ ಇತರ ಕಾಲೇಜಿನಿಂದ ಆ ಕಾಲೇಜಿಗೆ ಬಂದಂತಹ ವಿದ್ಯಾರ್ಥಿಗಳಿಗೂ ಇದೇ ರೀತಿ ಮನಪರಿವರ್ತನೆಗೆ ಕಳುಹಿಸಬೇಕು’.
ಪೊಲೀಸ್ ಇಲಾಖೆ ಮೇಲೆ ನಮಗೆ ನಂಬಿಕೆಯಿದೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಕೆಲವು ಬೆಳವಣಿಗೆಗಳು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಸರಿಯಾದ ನ್ಯಾಯ ದೊರಕದೇ ಇದ್ದಲ್ಲಿ ಪುತ್ತೂರಿನಾದ್ಯಂತ ಉಗ್ರ ರೀತಿಯ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.