ಪುತ್ತೂರು: ಪುತ್ತೂರು ಇಲ್ಲಿನ ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆಯನ್ನು ನ.26 ರಂದು ಆಚರಿಸಲಾಯಿತು.
ಕಾರ್ಯಕ್ರಮವನ್ನು ಪುತ್ತೂರಿನ ವಕೀಲರಾದ ಚಿದಾನಂದ ಬೈಲಾಡಿ ರವರು ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಂವಿಧಾನದ ಮಹತ್ವದ ಬಗ್ಗೆ ವಿವರಿಸಿದರು. ಕಾನೂನು ಗೊತ್ತಿಲ್ಲ ಎನ್ನುವುದಕ್ಕೆ ಕ್ಷಮೆಯಿಲ್ಲ, ಕಾನೂನಿನ ಬಗ್ಗೆ ಎಲ್ಲಾರೂ ತಿಳಿದಿರಬೇಕು. ಸ್ವಾತಂತ್ಯ ದೊರಕುವ ಮೊದಲೇ ಸಂವಿಧಾನದ ರಚನಾ ಕಾರ್ಯಾ ಆರಂಭವಾಗಿದ್ದು, ಸಂವಿಧಾನ ರಚನೆ, ಅದರ ಮಹತ್ವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಒಂದು ದೇಶಕ್ಕೆ ಸಂವಿಧಾನ ಇಲ್ಲದಿದ್ದರೆ ಯಾವ ಸ್ಥಿತಿಗೆ ದೇಶ ತಿರುಗಬಹುದೆಂಬುದನ್ನು ಕೆಲವು ನೆರೆ ದೇಶಗಳನ್ನು ನೋಡಿದರೆ ತಿಳಿಯುತ್ತದೆ. ಗಣರಾಜ್ಯ ದಿನಾಚರಣೆಯನ್ನು ಮಾತ್ರ ಆಚರಿಸುವ ಸಂದರ್ಭದಲ್ಲಿ ರಚನೆಯಾದ ದಿನವನ್ನು ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸುತ್ತಿರುವ ಸಂಸ್ಥೆಯ ನಡೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿ, ಬಹುಮಾನ ವಿತರಿಸಿ, ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು ರವರು ಕಾನೂನಿನ ಅರಿವು ಹಾಗೂ ಅದರ ಆಳವಡಿಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಉಪನ್ಯಾಸಕರಾದ ಕಿಶೋರ್ ಕುಮಾರ್ ರೈ ರವರು ವಾಚಿಸಿ,ಎಲ್ಲಾರೂ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವಂದಿಸಿದರು. ವಿದ್ಯಾರ್ಥಿನಿ ಸ್ವರ್ಣ ಜ್ಯೋತ್ನಾ ಕಾರ್ಯಕ್ರಮವನ್ನು ನಿರೂಪಿಸಿದರು.