Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗ್ರಾಮೀಣ ಭಾಗದ ಯುವ ವಕೀಲ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಸಾಧನೆ..!!

    ಗ್ರಾಮೀಣ ಭಾಗದ ಯುವ ವಕೀಲ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಸಾಧನೆ..!!

    ಉಪ್ಪಿನಂಗಡಿ : ಅಕ್ರಮ ಮರಳು ದಾಸ್ತಾನು: 30 ಟನ್ ಮರಳು ವಶ : ಪ್ರಕರಣ ದಾಖಲು..!

    ಉಪ್ಪಿನಂಗಡಿ : ಅಕ್ರಮ ಮರಳು ದಾಸ್ತಾನು: 30 ಟನ್ ಮರಳು ವಶ : ಪ್ರಕರಣ ದಾಖಲು..!

    ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಉದ್ಘಾಟನೆ : ರೋಟರಿ ಯುವ ಕುಟುಂಬದ ಪುಟಾಣಿಗಳಿಂದ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ..!!

    ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಉದ್ಘಾಟನೆ : ರೋಟರಿ ಯುವ ಕುಟುಂಬದ ಪುಟಾಣಿಗಳಿಂದ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ..!!

    ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ..!!

    ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ..!!

    ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!

    ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!

    ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

    ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಂಗಳೂರು

ಮುಳಿಯ ಫೌಂಡೇಶನ್ ಮತ್ತು ಕರ್ನಾಟಕ ಲೇಖಕಿಯರ ಸಂಘದಲ್ಲಿ ಕನ್ನಡದ ಭಾವ ಬದುಕು ಬಂಗಾರ ಕಾರ್ಯಕ್ರಮ

November 27, 2021
in ಬೆಂಗಳೂರು
0
ಮುಳಿಯ ಫೌಂಡೇಶನ್ ಮತ್ತು ಕರ್ನಾಟಕ ಲೇಖಕಿಯರ ಸಂಘದಲ್ಲಿ ಕನ್ನಡದ ಭಾವ ಬದುಕು ಬಂಗಾರ ಕಾರ್ಯಕ್ರಮ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರಿನಲ್ಲಿ ಮುಳಿಯ ಪ್ರತಿಷ್ಠಾನ ಮತ್ತು ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಚಿಂತನ ಮಂಥನ ‘ಮನೆ-ಮನದಲ್ಲಿ ಕನ್ನಡ’ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಉದ್ಘಾಟಿಸಿದರು. .

Advertisement
Advertisement
Advertisement

‘ಎಲ್ಲ ಉದ್ಯಮ ಸಂಸ್ಥೆಗಳು ಕನ್ನಡದ ಕಾಳಜಿ ತೋರಿ ಪ್ರೋತ್ಸಾಹಿಸಿದರೆ ಭಾಷೆಯ ಉಳಿವು, ಬೆಳವಣಿಗೆ ಏನೂ ಕಷ್ಟವಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು. ಅವರು ಶುಕ್ರವಾರ ನಗರದ ಮುಳಿಯ ಜುವೆಲ್ಸ್‌ ಆಭರಣ ಸಂಸ್ಥೆಯಲ್ಲಿ ಮುಳಿಯ ಪ್ರತಿಷ್ಠಾನ ಮತ್ತು ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಚಿಂತನ ಮಂಥನ ‘ಮನೆ-ಮನದಲ್ಲಿ ಕನ್ನಡ’ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾಷೆ ಭಾಷಣದ ವಸ್ತು ಅಲ್ಲ. ಅದು ನಮ್ಮ ಸಂಸ್ಕೃತಿ, ನಡವಳಿಕೆಯನ್ನು ಒಳಗೊಂಡಿದೆ. ಸಂಸ್ಕೃತಿ ಶ್ರೀಮಂತಗೊಳಿಸಲು ಕನ್ನಡದಷ್ಟು ಶ್ರೀಮಂತ ಭಾಷೆ ಇನ್ನೊಂದು ಇಲ್ಲ. ಇತ್ತೀಚೆಗೆ ‘ಮಾತಾಡ್‌ ಮಾತಾಡ್‌ ಕನ್ನಡ’ ಪರಿಕಲ್ಪನೆಗೆ ಸುಮಾರು ೨೦ ಲಕ್ಷಕ್ಕೂ ಅಧಿಕ ಜನ ಸ್ಪಂದಿಸಿದ್ದರು. ಅಂದರೆ ನಮ್ಮಲ್ಲಿ ಭಾಷಾಭಿಮಾನ ಖಂಡಿತವಾಗಿಯೂ ಇದೆ. ಆದರೆ, ಅಭಿವ್ಯಕ್ತಿಗೆ ವೇದಿಕೆ ಬೇಕಿತ್ತು ಅಷ್ಟೇ’ ಎಂದರು.

Advertisement
Advertisement

ಸಾಹಿತಿ, ಸಂಶೋಧಕಿ ಡಾ.ಕಮಲಾ ಹಂಪನಾ ಮಾತನಾಡಿ, ‘ಹಿಂದಿಯೊಂದೇ ರಾಷ್ಟ್ರಭಾಷೆ ಅಲ್ಲ. ಹೆಚ್ಚು ಬಳಕೆಯಲ್ಲಿ ಇರುವ ಕಾರಣ ಅದು ರಾಷ್ಡ್ರಭಾಷೆ ಎಂದು ಕರೆಸಿಕೊಂಡಿದೆ ಅಷ್ಟೆ. ಕನ್ನಡ ಸಹಿತ ಭಾರತದ ೨೩ ಭಾಷೆಗಳೂ ರಾಷ್ಟ್ರಭಾಷೆಗಳೇ ಆಗಿವೆ.

ಹೀಗಿದ್ದೂ ಹಿಂದಿಯ ಒತ್ತಡ ಹೇರಿದಾಗ ನಾವು ಪ್ರತಿರೋಧ ತೋರಲೇಬೇಕಾಗಿದೆ’ ಎಂದರು. ‘ಬಂಗಾರದ ಮಳಿಗೆಯಲ್ಲಿ ಕನ್ನಡ ವಜ್ರ ಆಗಬೇಕು. ನಮ್ಮ ಮನೆಗಳಲ್ಲಿ ಕನ್ನಡದ ಪದಗಳು ನಲಿದಾಡಬೇಕು. ಅಂಥ ಪದ ಸಮೃದ್ಧತೆಯನ್ನು ಕನ್ನಡ ಹೊಂದಿದೆ. ಹಾಗಿದ್ದರೂ ನಮ್ಮ ವ್ಯವಹಾರಗಳಿಗೆ ಪರಭಾಷೆಯನ್ನು ನೆಚ್ಚಿಕೊಂಡಿರುವುದನ್ನು ನೋಡಿದಾಗ ನೋವೆನಿಸುತ್ತದೆ’ ಎಂದು ಹೇಳಿದರು.

‘ನನ್ನ ಬ್ಯಾಂಕ್‌ ವ್ಯವಹಾರ ಎಲ್ಲವೂ ಕನ್ನಡದಲ್ಲೇ ನಡೆಯುತ್ತಿದೆ. ಯಾರೂ ನನ್ನ ಕನ್ನಡದ ವ್ಯವಹಾರವನ್ನು ತಿರಸ್ಕರಿಸಿಲ್ಲ. ಹಾಗೊಂದು ವೇಳೆ ತಿರಸ್ಕರಿಸಿದರೆ ಅವರು ಉಳಿಯುವುದೂ ಇಲ್ಲ’ ಎಂದರು.

ಸಾಹಿತಿ, ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಮ್‌ ಮಾತನಾಡಿ, ‘ಮೂಲತಃ ತಮಿಳು ಮಾತೃಭಾಷೆಯವಳಾದ ನಾನು ೨೨ನೇ ವಯಸ್ಸಿನಲ್ಲಿ ಕನ್ನಡ ಕಲಿತು ಪತ್ರಿಕೆಯಲ್ಲಿ ಮುಖಪುಟ ಲೇಖನ ಬರೆಯುವಂತಾಯಿತು. ಶಿಕ್ಷಕಿಯಾಗಿದ್ದಾಗ ಮಕ್ಕಳಿಗೆ ಕನ್ನಡ ಕಲಿಸಲಾಗದೇ ಅತ್ತಿದ್ದೂ ಇದೆ. ಪಾಠ ಕಲಿಸಬೇಕಾದಾಗ ಕನ್ನಡ ಕಲಿಯಲೇಬೇಕಾಯಿತು. ಕನ್ನಡವನ್ನು ಸ್ವಾಗತಿಸಿ ಆಸ್ವಾದಿಸಿದ್ದಕ್ಕೆ ನನಗೆ ಕನ್ನಡ ತಾಯಿ ಸಿಕ್ಕಿದಳು. ಹಾಗೆ ನೋಡಿದರೆ ಮಹಿಳೆಯರಿಗೇ ಇಂಗ್ಲಿಷ್‌ ವ್ಯಾಮೋಹ ಹೆಚ್ಚು. ಇದೇ ಬೇಸರದ ಸಂಗತಿ’ ಎಂದರು. ’

ಹಾಸ್ಯ ಸಾಹಿತಿ ಪ್ರೊ.ಭುವನೇಶ್ವರಿ ಹೆಗಡೆ ಮಾತನಾಡಿ, ‘ಲಕ್ಷ್ಮಿಯ ಜಾಗಕ್ಕೆ ಸರಸ್ವತಿಯನ್ನು ಕರೆದಿದ್ದೀರಿ. ಸರಸ್ವತಿ ಭುವನೇಶ್ವರಿ (ಕನ್ನಡ ತಾಯಿ) ಇಲ್ಲಿ ಬಂದಿದ್ದಾಳೆ. ಉದ್ಯಮ ಬೆಳವಣಿಗೆಗೆ ನೂರಾರು ಮರ‍್ಗಗಳು ಇವೆ. ಆದರೆ, ಕನ್ನಡತನವನ್ನು ಸೇರಿಸಿಕೊಂಡು ನಾಡಿನ ಅಸ್ಮಿತೆಯನ್ನು ಮುಳಿಯ ಸಂಸ್ಥೆ ಸಾರಿದೆ. ಮುಳಿಯ ತಿಮ್ಮಪ್ಪ ಅವರು ಕಡು ಬಡತನವನ್ನೂ ಕಂಡವರು. ಬಡತನವೇ ಅನೇಕ ಕವಿಗಳನ್ನು ಹುಟ್ಟು ಹಾಕಿದೆ. ಅವರ ಪರಂಪರೆಯನ್ನು ಕುಟುಂಬದವರು ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿನಂದನೀಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಳಿಯ ಆಭರಣ ಸಂಸ್ಥೆಯ ಆಡಳಿತ ನರ‍್ದೇಶಕ ಕೇಶವ ಪ್ರಸಾದ್‌ ಮುಳಿಯ ಮಾತನಾಡಿ, ‘ಕನ್ನಡದ ಭಾಷೆಯೆಂದರೆ ಕೇವಲ ಆಡು ನುಡಿಯಲ್ಲ. ಅಲ್ಲೊಂದು ಜನಸಂಸ್ಕೃತಿ, ಉಡುಗೆ, ತೊಡುಗೆ ಆಭರಣಗಳು ಇವೆ. ಕನ್ನಡನಾಡಿನಲ್ಲಿ ಅದ್ಭುತವಾದ ಆಭರಣ ವೈವಿಧ್ಯ ಇದೆ. ದಕ್ಷಿಣಕನ್ನಡದ ಕರಿಮಣಿ, ಕೊಡವರ ವಿಶಿಷ್ಟ ಆಭರಣಗಳು ಹೀಗೆ ಪ್ರದೇಶವಾರು ವಿಶಿಷ್ಟತೆಯನ್ನು ಹೊಂದಿವೆ. ಅವುಗಳಿಗೆ ನಮ್ಮ ಸಂಸ್ಥೆ ಆದ್ಯತೆ ನೀಡಿ ಗ್ರಾಹಕರಿಗೆ ಪರಿಚಯಿಸುತ್ತಿದೆ’ ಎಂದರು.

‘ದಾಸ ಸಾಹಿತ್ಯದ ಮೇಲೆ ಒಂದು ಕಮ್ಮಟ, ವ್ಯಾಪಾರಿಗಳಿಗಾಗಿ ವಾಣಿಜ್ಯ ಕನ್ನಡ, ಮಾಧ್ಯಮದವರ ಭಾಷಾಶುದ್ಧತೆಯ ಕಮ್ಮಟಗಳನ್ನು ನಡೆಸಲೂ ಮುಳಿಯ ಪ್ರತಿಷ್ಠಾನ ಚಿಂತನೆ ನಡೆಸಿದೆ’ ಎಂದರು.
ರ‍್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌ ಮಾತನಾಡಿ, ‘ ನಮ್ಮ ಭಾಷೆಯನ್ನು ಮಾತನಾಡಲು ನಮ್ಮ ತಾಯಂದಿರಿಗೇ ಕೀಳರಿಮೆ ಇದೆ. ಅದು ತೊಲಗಬೇಕು. ಮೊದಲು ನಮ್ಮ ಸಂಸ್ಕೃತಿಯ ಅದ್ಭುತಗಳನ್ನು ಅರಿತು ಮಕ್ಕಳಿಗೆ ಕಲಿಸಬೇಕು. ಈ ನಿಟ್ಟಿನಲ್ಲಿ ಲೇಖಕಿಯರ ಸಂಘ ಮುಳಿಯದಂತಹ ಸಂಸ್ಥೆಯೊಂದಿಗೆ ಕೈಜೋಡಿಸಿ ನಿರಂತರ ಶ್ರಮಿಸಲಿದೆ’
ಎಂದರು.

ಲಂಡನ್‌ನ ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾ.ನೀರಜ್‌ ಪಾಟೀಲ್‌ ಮಾತನಾಡಿ, ‘ನಾನು ಕನ್ನಡದ ಪ್ರಮುಖ ಕವಯಿತ್ರಿ ಅಕ್ಕಮಹಾದೇವಿ ಅವರಿಂದ ಸ್ಫರ‍್ತಿ ಪಡೆದಿದ್ದೇನೆ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗ ಪಕ್ಷಿಗಳಿಗೆ
ಅಂಜಿದೊಡೆಂತಯ್ಯಾ ಎಂಬ ಸಾಲಿನಂತೆ, ರಾಜಕಾರಣಕ್ಕೆ ಬಂದ ಮೇಲೆ ಟೀಕೆಗಳಿಗೆ ಅಂಜಬಾರದು ಎಂದು ಕಲಿತಿದ್ದೇನೆ’ ಎಂದರು.

‘ಲಂಡನ್‌ನಲ್ಲಿ ಕನ್ನಡ ಕಲಿಸುವ ಕೆಲಸ ಸಾಗಿದೆ. ಅನಿವಾಸಿ ಕನ್ನಡ ಲೇಖಕರ ಸಂಘ ಇದೆ. ಅಲ್ಲಿಯೂ ಸಾಕಷ್ಟು ಕೆಲಸಗಳಾಗಿವೆ. ನಾವು ಹಿಂದಿ ವಿರೋಧಿಗಳಲ್ಲ. ಆದರೆ, ಹಿಂದಿ ಜೊತೆಗೆ ಬೇರೆ ಭಾಷೆಗಳನ್ನೂ ಪ್ರೋತ್ಸಾಹಿಸಬೇಕು. ಅದಕ್ಕಾಗಿ ಸಂವಿಧಾನದ ೩೪೩ನೇ ವಿಧಿಯನ್ನು ತಿದ್ದಿಪಡಿ ಮಾಡಿ ಇತರ ಭಾಷೆಗಳಿಗೆ ಮಹತ್ವ ನೀಡುವಂತಾಗಲು ನಮ್ಮ ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕು’ ಎಂದರು.

ಕರ‍್ಯಕ್ರಮ ಸಂಯೋಜಕ ವೇಣು ರ‍್ಮಾ ತಮ್ಮ ಆಶಯ ಭಾಷಣದಲ್ಲಿ, ‘ಗುಡ್‌ಮರ‍್ನಿಂಗ್‌ ಅನ್ನುವುದು ನಮಸ್ಕಾರ ಆದಾಗ, ರೈಸ್‌ ಅನ್ನವಾದಾಗ, ರಸಂ ಸಾರು ಆದಾಗ ನಮ್ಮ ನಿತ್ಯ ಜೀವನವೂ ಕನ್ನಡಮಯವಾಗಿರುತ್ತದೆ. ಈ ಕೆಲಸ ಅಮ್ಮಂದಿರಿಂದಲೇ ಆರಂಭವಾಗಬೇಕು ಕನ್ನಡತನ ನಮ್ಮದಾಗಬೇಕು’ ಎಂದರು.,’

ಹಿರಿಯ ಸಾಹಿತಿ ನಾ.ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಹೇಮಾ ವಿನಾಯಕ ಪಾಟೀಲ್‌ ಅವರು ಕಾರ್ಯಕ್ರಮದ ಆಶಯ ಸಾರುವ ನಾಡದೇವಿ ಭುವನೇಶ್ವರಿಯ ಚಿತ್ರ ಬಿಡಿಸಿದರು. ಲೇಖಕಿಯರ ಸಂಘ ಹಾಗೂ ಮುಳಿಯ ಪ್ರತಿಷ್ಠಾನದ ಪದಾಧಿಕಾರಿಗಳು.ಪ್ರತಿಷ್ಠಾನದ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್‌, ಲಂಡನ್‌, ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾ.ನೀರಜ್‌ ಪಾಟೀಲ್‌, ಡಾ.ಕಮಲಾ ಹಂಪನಾ, ಪ್ರೊ. ಭುವನೇಶ್ವರಿ ಹೆಗಡೆ ಉಪಸ್ಥಿತರಿದ್ದರು

Advertisement
Previous Post

ಮಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ತಾಯಿ ಹಾಗೂ 2 ಮರಿಯಾನೆ ಸಾವು..!!

Next Post

ಪುತ್ತೂರು: ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿದ್ಯಾರ್ಥಿಗಳು ಮನೆಗೆ :; ಗೊಂದಲಗಳಿಗೆ ತೆರೆ…!!

OtherNews

ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!
ಕ್ರೈಮ್

ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!

February 17, 2026
ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!
ಕ್ರೈಮ್

ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

February 17, 2026
ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!
ಕ್ರೈಮ್

ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!

February 16, 2026
ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!
Featured

ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!

February 15, 2026
ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!
Featured

ಪುತ್ತೂರು: ಚೆನ್ನರಾಯಪಟ್ಟಣ ಬಳಿ ರೈಲಿನಿಂದ ಬಿದ್ದು ಯುವಕ ಮೃತ್ಯು..!!!

February 10, 2026
ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!
Featured

ಕೆಲಸ ಹುಡುಕಲು ಹೋದವಳು ಶವವಾಗಿ ಪತ್ತೆ…!!!

January 21, 2026

Leave a Reply Cancel reply

Your email address will not be published. Required fields are marked *

Recent News

ಗ್ರಾಮೀಣ ಭಾಗದ ಯುವ ವಕೀಲ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಸಾಧನೆ..!!

ಗ್ರಾಮೀಣ ಭಾಗದ ಯುವ ವಕೀಲ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಸಾಧನೆ..!!

February 17, 2026
ಉಪ್ಪಿನಂಗಡಿ : ಅಕ್ರಮ ಮರಳು ದಾಸ್ತಾನು: 30 ಟನ್ ಮರಳು ವಶ : ಪ್ರಕರಣ ದಾಖಲು..!

ಉಪ್ಪಿನಂಗಡಿ : ಅಕ್ರಮ ಮರಳು ದಾಸ್ತಾನು: 30 ಟನ್ ಮರಳು ವಶ : ಪ್ರಕರಣ ದಾಖಲು..!

February 17, 2026
ವ್ಯಾಲೆಂಟೈನ್ಸ್ ಡೇ ಡಿನ್ನರ್ ಮುಗಿಸಿ ಮನೆಗೆ ಬಂದು ಪತ್ನಿಯನ್ನ ಬರ್ಬರವಾಗಿ ಮುಗಿಸಿದ

ವ್ಯಾಲೆಂಟೈನ್ಸ್ ಡೇ ಡಿನ್ನರ್ ಮುಗಿಸಿ ಮನೆಗೆ ಬಂದು ಪತ್ನಿಯನ್ನ ಬರ್ಬರವಾಗಿ ಮುಗಿಸಿದ

February 17, 2026
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಉದ್ಘಾಟನೆ : ರೋಟರಿ ಯುವ ಕುಟುಂಬದ ಪುಟಾಣಿಗಳಿಂದ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ..!!

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಉದ್ಘಾಟನೆ : ರೋಟರಿ ಯುವ ಕುಟುಂಬದ ಪುಟಾಣಿಗಳಿಂದ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ..!!

February 17, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page