ಉಡುಪಿ: ಸತ್ತ ಹಸುವನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ರಸ್ತೆಯಲ್ಲೇ ಎಳೆದೊಯ್ದ ಅಮಾನವೀಯ ಘಟನೆ ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎರಡು ಹಸುಗಳು ಸತ್ತು ಬಿದ್ದಿದ್ದು, ವಾಹನಕ್ಕೆ ಹಾಕಿ ಹಸುವಿನ ಶವ ಸಾಗಿಸುವ ಬದಲು ಹಸುವನ್ನ ವಾಹನಕ್ಕೆ ಕಟ್ಟಿ ಎಳೆದೊಯ್ದು ಅವಾಂತರ ಮಾಡುವ ಮೂಲಕ ಐಆರ್ ಬಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸತ್ತ ಹಸುಗಳನ್ನು ಟೊಯಿಂಗ್ ವಾಹನದ ಮೂಲಕ ಎಳೆದೊಯ್ಯುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಬೈಂದೂರು ಹಿಂದೂ ಜಾಗರಣ ವೇದಿಕೆ ಐಆರ್‌ಬಿ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು,
ಹಸುಗಳನ್ನು ಈ ರೀತಿಯಾಗಿ ಬೀದಿಗಳಲ್ಲಿ ಎಳೆದುಕೊಂಡು ಹೋಗುವ ಹೇಯ ಕೃತ್ಯಕ್ಕೆ ನಾಚಿಕೆಯಾಗಬೇಕು. ನಿಮಗೆ ಗೋವಿನ ಶಾಪ ತಟ್ಟದೆ ಇರುವುದಿಲ್ಲ ಎಂದಿದೆ. ನಿಮ್ಮ ಬೇಜಾವಾಬ್ದಾರಿತನದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಇದರ ವಿರುದ್ದ ಹಿಂದೂ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದೆ.