ಉಪ್ಪಿನಂಗಡಿ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ಡಿ.5 ರಂದು ತಡರಾತ್ರಿ ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಜಕಾರಿಯಾ ಎಂಬವರು ನೀಡಿದ ದೂರಿನಂತೆ , ಜಯರಾಮ್, ಸಂದೀಪ್, ಸುಪ್ರೀತ್, ಪ್ರೀತಮ್, ಲತೇಶ್, ಹಾಗೂ ಇನ್ನಿತರರು ಸೇರಿ ಒಟ್ಟು 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆಎಂದು ತಿಳಿದು ಬಂದಿದೆ.
ಡಿ.5 ರಂದು ರಾತ್ರಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿರುವ ಇಕ್ಬಾಲ್ ರವರ ಜಿನಸು ಅಂಗಡಿ ಬಳಿ ಅಬ್ದುಲ್ ಜಕಾರಿಯಾ ಮತ್ತು ಸಿದ್ಧಿಕ್ ನಿಂತಿರುವಾಗ ತಲವಾರು ಮತ್ತು ರಾಡ್ ಗಳನ್ನು ಹಿಡಿದುಕೊಂಡು ಸುಮಾರು 30 ಬೈಕ್ ಗಳಲ್ಲಿ ಬಂದ ಆರೋಪಿಗಳು, ಸಿದ್ಧಿಕ್ ಗೆ ತಲವಾರಿನಿಂದ ಮತ್ತು ರಾಡ್ ಹಲ್ಲೆ ನಡೆಸಿದ್ದು ಹಾಗೂ ಅಬ್ದುಲ್ ಜಕಾರಿಯಾ ಮೇಲೆ ಹಲ್ಲೆ ನಡೆಸಿದ್ದು ಮತ್ತು ಅಯೂಬ್ ಮೇಲೆಯೂ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಅಸುಪಾಸಿನ ಜನರು ಸೇರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪುತ್ತೂರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ:151/2021 ಕಲಂ:143,147,148,324,307 ಜೊತೆಗೆ 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.