ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಜೂ.13ರಂದು ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ.
ರಾತ್ರಿ ವೇಳೆ ಅಕ್ರಮವಾಗಿ ಹೋರಿಗಳನ್ನು ಪಿಕಪ್ ನಲ್ಲಿಸಾಗಿಸಲಾಗಿದ್ದು, ಪಿಕಪ್ ಕುಲ್ಕುಂದ ದಾಟಿ ಹೋಗುತ್ತಿದ್ದಾಗ ತಿರುವೊಂದರಲ್ಲಿ ಪಲ್ಟಿ ಹೊಡೆದಿದೆ.
ಪಿಕಪ್ ನಲ್ಲಿ ಎರಡು ಹೋರಿಗಳಿದ್ದು ಅದರ ಕಾಲು ಕೈಕಟ್ಟಿ ಹಾಕಲಾಗಿತೆನ್ನಲಾಗಿದೆ. ಪಿಕಪ್ ಪಲ್ಟಿ ಹೊಡೆದ ಬಳಿಕ ಎತ್ತುಗಳನ್ನು ಕೈಕಾಲು ಬಿಡಿಸಿ ಬಿಡಲಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರಕಲಗೂಡು ಮೂಲದ ಚಂದ್ರಶೇಖರ ಮತ್ತು ಮೋಹನ್ ಗೋ ಸಾಗಾಟ ಮಾಡಿರುವುದಾಗಿ ತಿಳಿದು ಬಂದಿದೆ.


























