ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ವೇದವಾಕ್ಯದಡಿ ವಿಶ್ವದಾದ್ಯಂತ ಹಿಂದೂಗಳ ಸಂಘಟನಾ ಜಾಗೃತಿ ಕಾರ್ಯ ಮಾಡುತ್ತಿರುವ ಸಂಘಟನೆ ವಿಶ್ವ ಹಿಂದೂ ಪರಿಷತ್, ಆದರಲ್ಲೂ ಮಂಗಳೂರು ವಿಭಾಗದಲ್ಲಿ ಹಿಂದೂಗಳ ಮುಖವಾಣಿಯಾಗಿ ಕಟ್ಟ ಕಡೆಯ ಹಿಂದೂವಿನ ರಕ್ಷಣೆ,ಸೇವೆಯ ಕಾರ್ಯವನ್ನು ಅನೇಕ ವರ್ಷಗಳಿಂದ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಕೊರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸಂಘಟನೆ ಯಾವ ರೀತಿ ಸೇವಾಕಾರ್ಯ ಮಾಡಿದೆ ಎಂದು ಸಮಾಜಕ್ಕೆ ತಿಳಿದಿದೆ.
ಮಂಗಳೂರು ಭಾಗದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ, ಲವ್ ಜಿಹಾದ್, ಮತಾಂತರ,ಗೋಹತ್ಯೆ, ಧಾರ್ಮಿಕ ಕ್ಷೇತ್ರಗಳ ಮೇಲೆ ಅಪಚಾರ ಮಾಡುವಂತಹ ಸಂದರ್ಭದಲ್ಲಿ ಧೈರ್ಯವಾಗಿ ಎದುರಿಸಿ,ಹೋರಾಡಿ,ನ್ಯಾಯ ಒದಗಿಸಿಕೊಟ್ಟಿರತಕ್ಕಂತಹ ಸಂಘಟನೆ ವಿಶ್ವ ಹಿಂದೂ ಪರಿಷತ್ ಬಜರಂಗದಳ.
ನಮ್ಮ ಸಂಘಟನೆಯ ಪ್ರಾಂತ ಸಂಯೋಜಕರಾಗಿ ಪ್ರಸ್ತುತ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶರಣ್ ಪಂಪ್ವೇಲ್ ಅವರು ಎಲ್ಲಾ ಯುವಕರಿಗೆ ಪ್ರೇರಣೆ, ಮಾರ್ಗದರ್ಶನ ನೀಡುತ್ತಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಅನೇಕ ದಿನಗಳಿಂದ ಮಾನಹಾನಿ, ಆತ್ಮಸ್ಥೈರ್ಯ ಕೆಡಿಸುವಂತಹ ಕೆಲಸಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ವಿಚಾರಗಳನ್ನು ಹಾಕಿ ಅಪಪ್ರಚಾರ ಮಾಡುತ್ತ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮುಖಾಂತರ ಸಂಘಟನೆಯ, ಕಾರ್ಯಕರ್ತರ ಆತ್ಮವಿಶ್ವಾಸವನ್ನು ಕಡಿಮೆ ಮಾಡುವಂತಹ ಪ್ರಯತ್ನಗಳು ನಡೆಯುತ್ತಿದೆ.
ಮೊನ್ನೆ ಉಪ್ಪಿನಂಗಡಿಯ ಘಟನೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶರಣ್ ಪಂಪ್ವೆಲ್ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಬಳಸಿ ಅಪಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಅತ್ಯಂತ ಕಡು ಶಬ್ದಗಳಲ್ಲಿ ಖಂಡಿಸುತ್ತೇವೆ. ಹಾಗೂ ಈಗಾಗಲೇ ಕೇಸು ದಾಖಲಿಸಿರುವ ಪೊಲೀಸ್ ಇಲಾಖೆ ಸೂಕ್ತ ವಿಚಾರಣೆ ನಡೆಸಿ ಇಂತಹ ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇವೆ. ಮತ್ತು ಇಂತಹ ಹೀನ ಕಾರ್ಯ ಮಾಡುತ್ತಿರುವವರು ಕೆಟ್ಟ ಕೆಲಸ ಬಿಟ್ಟು ರಾಷ್ಟ್ರ, ಸಮಾಜದ ಕಾರ್ಯಗಳಿಗೆ ತೊಡಗಿಸಿಕೊಳ್ಳಿ ಇಲ್ಲದೇ ಇದ್ದರೆ ಇದನ್ನೇ ಮುಂದುವರಿಸಿದರೆ ಮುಂದೆ ತೊಂದರೆಗೀಡಾಗಬೇಕಾದಿತೆಂದು ಎಚ್ಚರಿಸುತ್ತಿದ್ದೇವೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ ಹಸಂತ್ತಡ್ಕ ತಿಳಿಸಿದ್ದಾರೆ.



























