ವಿಟ್ಲ: ಲಾರಿ ಅಪಘಾತದಲ್ಲಿ ವಿಟ್ಲ ನಿವಾಸಿಯೊಬ್ಬರು ಮೃತಪಟ್ಟ ಘಟನೆ ಮುಂಬೈಯಲ್ಲಿ ನಡೆದಿದೆ.
ಮೃತರನ್ನು ಮಾಮೇಶ್ವರ ನಿವಾಸಿ ಧರ್ಮ(45) ಎನ್ನಲಾಗಿದೆ.
ಧರ್ಮ ರವರು ಮುಂಬೈನಲ್ಲಿ ಅಮುಲ್ ಐಸ್ ಕ್ರಿಮ್ ನ ಲಾರಿಯಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿಸುತ್ತಿದ್ದು,ಲಾರಿ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಹೆಂಡತಿ ಮತ್ತು ಐದು ಮಕ್ಕಳನ್ನು ಅಗಲಿದ್ದಾರೆ.