ಬಂಟ್ವಾಳ: ಬಾರ್ ನಲ್ಲಿ ಮದ್ಯ ಸೇವಿಸಿ ಹಣ ನೀಡದೆ ಗಲಾಟೆ ಮಾಡಿದ ಘಟನೆಗೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮ್ಮೆಮಾರ್ ನಿವಾಸಿ ಅಬ್ದುಲ್ ರಹಿಮಾನ್ @ಮುನ್ನಿ ಎಂಬಾತನು ಫರಂಗಿಪೇಟೆಯಲ್ಲಿರುವ ಬಾರ್ ಗೆ ಬಂದು ಮದ್ಯ ಸೇವನೆ ಮಾಡಿದ ಬಳಿಕ 1,560 ರೂ.ಗಳ ಬಿಲ್ಲು ಕೊಟ್ಟಾಗ ಹಣ ಕೊಡುವುದಿಲ್ಲ ಎಂದು ಹೇಳಿ ಉಡಾಫೆ ಹಾಗೂ ಗಲಾಟೆ ಮಾಡಿದ್ದಾನೆ ಹಾಗೂ ಬಿಲ್ ಕೊಡದೆ ಹೋಗಿದ್ದನು.
ಬಾರ್ ನ ಸಿಬಂದಿ ವಾಸವಿರುವ ರೂಂ ಬಳಿಗೆ ತೆರಳಿ ಬೆದರಿಕೆ ಹಾಕಿದ್ದನು. ರಾತ್ರಿ ಮತ್ತೆ ಬಾರ್ ಗೆ ಆಗಮಿಸಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿ, ಕಂಪ್ಯೂಟರ್ ಗೆ ಹಾನಿ ಮಾಡಿದ್ದಾನೆ ಎಂದು ಗುರುಪ್ರಸಾದ್ ಎಂ.ಆರ್. ದೂರು ನೀಡಿದ್ದಾರೆ.


























