ಮಂಗಳೂರು: ಇತ್ತೀಚೆಗೆ ವಾಮಂಜೂರು ಠಾಣಾ ವ್ಯಾಪ್ತಿಯ ನೀರುಮಾರ್ಗದಲ್ಲಿ ನಡೆದ ಹಲ್ಲೆ ಪ್ರಕರಣವೊಂದರಲ್ಲಿ ಕೇಸ್ ದಾಖಲಾಗಿ ಅಪರಾಧಿಗಳನ್ನು ಬಂಧಿಸಿರುವ ಪೊಲೀಸರು ಜೊತೆಗೆ ಹಲವು ನಿರಪರಾಧಿಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಶಾಸಕ ಡಾ.ಭರತ್ ಶೆಟ್ಟಿ ವೈ ಪೊಲೀಸ್ ಠಾಣೆಗೆ ತೆರಳಿ ಖುದ್ದಾಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನಿರಪರಾಧಿ ಯುವಕರನ್ನು ಠಾಣೆಯಿಂದ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪರಾಧಿಗಳ ವಿಚಾರಣೆಗೆ ಯಾರು ಅಡ್ಡಿಪಡಿಸುವುದಿಲ್ಲ, ಆದರೇ ವಿನಾಕಾರಣ ನಿರಪರಾಧಿಗಳಿಗೆ ಶಿಕ್ಷೆಯಾಗುವುದು ಸರಿಯಲ್ಲ, ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಹಿಂದೂ ಜಾಗರಣ ವೇದಿಕೆಯ ಹರೀಶ್ ಮಟ್ಟಿ ಹಾಗೂ ಮತ್ತಿತರರು ಜೊತೆಗಿದ್ದರು.