ವಿಟ್ಲ: ಪೆರುವಾಯಿ ಯುವಕ ಮಂಡಲ ಸಂಸ್ಥಾಪಕಾಧ್ಯಕ್ಷ ಕಲೈತೀಮಾರ್ ಮಂಜುನಾಥ ಶೆಟ್ಟಿ(80) ಡಿ.18 ರಂದು ನಿಧನರಾದರು.
ಮಂಜುನಾಥ ಶೆಟ್ಟಿ ಕಾಂಗ್ರೆಸ್ ಮುಖಂಡರಾಗಿದ್ದು, ಪೆರುವಾಯಿ ಯುವಕ ಮಂಡಲ ಸಂಸ್ಥಾಪಕಾಧ್ಯಕ್ಷರಾಗಿದ್ದು, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮೆಚ್ಚುಗೆ ಪಾತ್ರರಾಗಿದ್ದರು.