ವಿಟ್ಲ: ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ನಾಮ ಪತ್ರ ಹಿಂತೆಗೆತಕ್ಕೆ ಇಂದು ಕೊನೆ ದಿನವಾಗಿದ್ದು, 46 ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದು, ನಾಲ್ವರು ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಂತಿಮ ಕಣದಲ್ಲಿ 42 ಅಭ್ಯರ್ಥಿಗಳಿದ್ದಾರೆ. ಎಸ್ ಡಿ ಪಿ ಐ ಪಕ್ಷದಿಂದ ಒಟ್ಟು 8 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಅವರ ಪೈಕಿ ನಾಲ್ವರು ಹಿಂತೆಗೆದುಕೊಂಡಿದ್ದು, 2, 8, 13, 18 ವಾರ್ಡ್ ಗಳಲ್ಲಿ ನಾಲ್ವರು ಎಸ್ ಡಿ ಪಿ ಅಭ್ಯರ್ಥಿಗಳು, ಕಾಂಗ್ರೆಸ್ ನಿಂದ 18, ಬಿಜೆಪೆಯಿಂದ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
1ನೇ ವಾರ್ಡ್ ಕಾಂಗ್ರೆಸ್ ವಿ. ಮಹಮ್ಮದ್ ಅಶ್ರಫ್, ಬಿಜೆಪಿ ಕೃಷ್ಣಪ್ಪ ಗೌಡ, 2ನೇ ವಾರ್ಡ್ ಕಾಂಗ್ರೆಸ್ ಕಮಲಾಕ್ಷಿ, ಬಿಜೆಪಿ ಸಂಗೀತ, ಎಸ್. ಡಿ. ಪಿ. ಐ. : ಆಯಿಷ ಎನ್., 3ನೇ ವಾರ್ಡ್ ಕಾಂಗ್ರೆಸ್ ಶ್ರೀನಿವಾಸ ಶೆಟ್ಟಿ, ಬಿಜೆಪಿ ಸಿ.ಎಚ್.ಜಯಂತ, 4ನೇ ವಾರ್ಡ್ ಕಾಂಗ್ರೆಸ್ ಆಯಿಷಾ, ಬಿಜೆಪಿ ರಕ್ಷಿತ, 5ನೇ ವಾರ್ಡ್ ಕಾಂಗ್ರೆಸ್ ವಸಂತಿ, ಬಿಜೆಪಿ ವಸಂತ ಕೆ., 6ನೇ ವಾರ್ಡ್ ಕಾಂಗ್ರೆಸ್ ಲೀಲಾವತಿ, ಬಿಜೆಪಿ ವಿಜಯಲಕ್ಷ್ಮಿ, 7ನೇ ವಾರ್ಡ್ ಕಾಂಗ್ರೆಸ್ ಶಿವಪ್ರಸಾದ್ ವಿ., ಬಿಜೆಪಿ: ರವಿಪ್ರಕಾಶ್ ಯಸ್., 8ನೇ ವಾರ್ಡ್ ಕಾಂಗ್ರೆಸ್ ಸುನೀತ ಕೊಟ್ಯಾನ್, ಬಿಜೆಪಿ ಸುನೀತಾ, ಎಸ್. ಡಿ. ಪಿ. ಐ ರಝೀಯಾ, 9ನೇ ವಾರ್ಡ್ ಕಾಂಗ್ರೆಸ್ ಶಿವಪ್ರಸಾದ್, ಬಿಜೆಪಿ ಎನ್. ಕೃಷ್ಣ, 10ನೇ ವಾರ್ಡ್ ಕಾಂಗ್ರೆಸ್ ಪದ್ಮ, ಬಿಜೆಪಿ ಸುಮತಿ, 11ನೇ ವಾರ್ಡ್ ಕಾಂಗ್ರೆಸ್ ರಮಾನಾಥ ವಿ, ಬಿಜೆಪಿ ಅರುಣ್ ಎಂ , ಪಕ್ಷೇತರ ಜಾನ್ ಡಿಸೋಜ, 12ನೇ ವಾರ್ಡ್ ಕಾಂಗ್ರೆಸ್ ಎಂ.ಕೆ ಮೂಸಾ, ಬಿಜೆಪಿ ಹರೀಶ್ ಸಿ.ಎಚ್, 13ನೇ ವಾರ್ಡ್ ಕಾಂಗ್ರೆಸ್ ಅಸ್ಮ ಯು.ಕೆ, ಬಿಜೆಪಿ ಪುಷ್ಪಾ, ಎಸ್‌ಡಿಪಿಐ ಶಾಕೀರ, 14ನೇ ವಾರ್ಡ್ ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿ ಸೋಜ, ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ, ಪಕ್ಷೇತರ ಮೋಹನ್ ಸೇರಾಜೆ, 15ನೇ ವಾರ್ಡ್ ಕಾಂಗ್ರೆಸ್ ಲತಾವೇಣಿ, ಬಿಜೆಪಿ ಸಂಧ್ಯಾಗಣೇಶ್, 16ನೇ ವಾರ್ಡ್ ಕಾಂಗ್ರೆಸ್ ಡೀಕಯ್ಯ, ಬಿಜೆಪಿ ಕೃಷ್ಣಪ್ಪ, 17ನೇ ವಾರ್ಡ್ ಕಾಂಗ್ರೆಸ್ ಶ್ರೀಚರಣ್, ಬಿಜೆಪಿ ಕರುಣಾಕರ, 18ನೇ ವಾರ್ಡ್ ಕಾಂಗ್ರೆಸ್ ಅಬ್ದುಲ್ ರಹಿಮನ್, ಬಿಜೆಪಿ ಕೃಷ್ಣಪ್ಪ ಮೂಲ್ಯ, ಎಸ್‌ಡಿಪಿಐ ಸಯ್ಯದ್ ಇಳ್ಯಾಸ್ ಅಂತಿಮ ಕಣದಲ್ಲಿದ್ದಾರೆ.