ಕೇರಳ: ಸರ್ಕಾರಿ ಕೆಲಸಕ್ಕೆ ಸೇರಿದ ಯುವತಿ 8 ದಿನಕ್ಕೆ, ಸಹೋದ್ಯೋಗಿಯಿಂದಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಕೋಯ್ಕೋಡ್‍ನಲ್ಲಿ ನಡೆದಿದೆ.
ಕೃಷ್ಣಪ್ರಿಯಾ(22) ಕೊಲೆಯಾದ ದುರ್ದೈವಿಯಾಗಿದ್ದಾಳೆ. ಥಿಕ್ಕೋಡಿ ನಿವಾಸಿ ನಂದನ್‍ಕುಮಾರ್(26) ಪಂಚಾಯತ್ ದಿನಗೂಲಿ ನೌರಕನಾಗಿದ್ದ ನಂದನ್‍ಕುಮಾರ್ ಕೃಷ್ಣಪ್ರಿಯಾಗೆ ಬೆಂಕಿಯಿಟ್ಟು ತಾನೂ ಪ್ರಾಣ ಬಿಟ್ಟಿದ್ದಾನೆ.
ಸ್ನಾತಕೋತ್ತರ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದ ಕೃಷ್ಣಪ್ರಿಯಾ ಪಂಚಾಯತ್ ಕಚೇರಿಯಲ್ಲಿ ಯೋಜನಾ ಸಹಾಯಕಿ ಹುದ್ದೆಗೆ(project assistant in the Panchayat) ಕೇವಲ 8 ದಿನಗಳ ಹಿಂದಷ್ಟೇ ಸೇರಿದ್ದಳು. ನಂದನ್‍ಕುಮಾರ್ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಪಂಚಾಯಾತ್ ಕಚೇರಿಯ ಮುಂದೆಯೇ ಕೃಷ್ಣಪ್ರಿಯಾಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಪಂಚಾಯತ್ ಕಚೇರಿಯ ಸಿಬ್ಬಂದಿ ಸ್ಥಳೀಯರ ಸಹಾಯ ಪಡೆದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಚಿಕಿತ್ಸೆ ಫಲಕಲಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ. ಮದುವೆ ಪ್ರಸ್ತಾಪವನ್ನು ಕೃಷ್ಣಪ್ರಿಯಾ ತಿರಸ್ಕರಿಸಿದ್ದಳು.
ಈ ವಿಚಾರವಾಗಿ ನೊಂದಿದ್ದ ನಂದನ್‍ಕುಮಾರ್ ಈ ಕೃತ್ಯವನ್ನು ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಇಬ್ಬರ ಸಾವಿಗೆ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.