ಪುತ್ತೂರು: ಮಗುವೊಂದು ವೈದ್ಯರ ಕೊಠಡಿಯೊಳಗೆ ಚಿಲಕ ಹಾಕಿಕೊಂಡಿದ್ದು, ಎಷ್ಟು ಕರೆದರು ಸ್ಪಂದಿಸದಿದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬಾಗಿಲಿನ ಲಾಕ್ ಮುರಿದು ಕೊಠಡಿಯೊಳಗೆ ಪ್ರವೇಶ ಮಾಡಿದ ಘಟನೆ ಡಿ.18 ರಂದು ಪುತ್ತೂರಿನ ಕಲ್ಲಾರೆಯ ಕಾನಾವು ಬಿಲ್ಡಿಂಗ್ ನಲ್ಲಿ ನಡೆದಿದೆ.
ವೈದ್ಯರ ಮಗುವೊಂದು ಚಿಲಕ ಹಾಕಿ ವೈದ್ಯರ ಕೊಠಡಿಯೊಳಗೆ ಮಲಗಿದ್ದು, ಕರೆದರೂ ಸ್ಪಂದಿಸಿದಿದ್ದಾಗ ಗಾಬರಿಗೊಂಡ ವೈದ್ಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದು, ತಕ್ಷಣ ಆಗಮಿಸಿದ ಅವರು ಕೊಠಡಿಯ ಲಾಕ್ ಮುರಿದು ಒಳಗೆ ಪ್ರವೇಶಿಸಲು ಅನುವು ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.