ಮಂಗಳೂರು: ತಾಲೂಕಿನ ಕುತ್ತೆತೂರು ಗ್ರಾಮದ ಎಂ.ಆರ್.ಪಿ.ಎಲ್. ಕಂಪೆನಿಯ ಸಿ.ಐ.ಎಸ್.ಎಫ್. ಯೂನಿಟ್‍ನಲ್ಲಿ ಇನ್ಸ್‍ಪೆಕ್ಟರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಡಿಗ್ಗಿ ಡಿ.ಎಸ್ (34 ) ಎಂಬವರು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿಗ್ಗಿ ರವರು 2021ರ ಡಿ.20 ರಂದು ಸಿ.ಐ.ಎಸ್.ಎಫ್ ಕ್ಯಾಂಪಸ್‍ನ ಬ್ಯಾಚುಲರ್ ಬ್ಯಾರಕ್‍ನಿಂದ ಕಾಣೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.



























