ಪುತ್ತೂರು: ಬೈಕ್ ನಲ್ಲಿ ಬಂದ ಯುವಕನೋರ್ವ ಪಾರ್ಕಿಂಗ್ ಮಾಡಿದ ಆಟೋ ರಿಕ್ಷಾವೊಂದರಿಂದ ಹಣ ಕಳವುಗೈದ ಘಟನೆ ಪುತ್ತೂರಿನ ಮುಖ್ಯ ರಸ್ತೆಯ ಎಳ್ಮುಡಿ ಸಮೀಪ ಡಿ.29 ರಂದು ರಾತ್ರಿ ನಡೆದಿದೆ.
ಪರ್ಪುಂಜ ನಿವಾಸಿ ರಾಕೇಶ್ ರೈ ಎಂಬವರು ಡಿ.29 ರಂದು ರಾತ್ರಿ ಪುತ್ತೂರಿನ ಮುಖ್ಯ ರಸ್ತೆಯ ಬಿಲ್ಡಿಂಗ್ ವೊಂದರ ಮುಂಭಾಗ ಆಟೋ ರಿಕ್ಷಾ ಪಾರ್ಕ್ ಮಾಡಿ ಹೋಗಿದ್ದು, ಈ ಸಂದರ್ಭದಲ್ಲಿ ಸ್ಪೆಂಡರ್ ಬೈಕ್ ನಲ್ಲಿ ಆಗಮಿಸಿದ ಯುವಕನೋರ್ವ ಆಟೋ ರಿಕ್ಷಾದಿಂದ ಪ್ಲಾಸ್ಟಿಕ್ ಬ್ಯಾಗ್ ಅನ್ನು ಕಳವುಗೈಯುವ ದೃಶ್ಯವು ಬಿಲ್ಡಿಂಗ್ ನ ಸಿಸಿ ಸಿಟಿಯಲ್ಲಿ ಸೆರೆಯಾಗಿದ್ದು, ಇದೀಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..
ಆಟೋ ರಿಕ್ಷಾದಲ್ಲಿದ್ದ ಬ್ಯಾಗ್ ನಲ್ಲಿ ಸಾವಿರಾರು ರೂ.ನಗದು ಹಾಗೂ ಅಗತ್ಯ ದಾಖಲೆ ಪತ್ರಗಳಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಖದೀಮನ ಕೈಚಳಕದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..!!👇👇