ಪುತ್ತೂರು: ಪಾಂಗಳಾಯಿ ಪರ್ಲಡ್ಕ ಶ್ರೀ ಅರಸು ಮುoಡ್ಯತ್ತಾಯ ದೈವಸ್ಥಾನದಲ್ಲಿ ಶ್ರೀ ಮುoಡ್ಯತ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವವು ಜ.1 ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ತಾರಾನಾಥ ರೈ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮುoಡ್ಯತ್ತಾಯ ದೈವಸ್ಥಾನ ಹಾಗೂ ಪರಿವಾರ ದೈವಗಳು ಅತ್ಯಂತ ಕಾರಣಿಕದ ದೈವಗಳಾಗಿದ್ದು ಕಳೆದ 14 ವರ್ಷಗಳ ಹಿಂದೆ ಶ್ರೀ ದೈವಗಳ ಸಾನಿಧ್ಯ ಹಾಗೂ ನಾಗಸನ್ನಿಧಿಯನ್ನು ಹತ್ತು ಸಮಸ್ತರ ಪಾಲ್ಗೊಳ್ಳುವಿಕೆಯಿಂದ ಪ್ರತಿಷ್ಟಾ ಬ್ರಹ್ಮಕಲಶ ನೆರವೇರಿಸಲಾಗಿತ್ತು ಎಂದರು.
ನೇಮಕ್ಕೆ ಪೂರ್ವಭಾವಿಯಾಗಿ ಡಿ.31 ರಂದು ರಾತ್ರಿ ದುರ್ಗಾಪೂಜೆ, ಜ.1 ರಂದು ಬೆಳಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಶ್ರೀ ಮಹಾಗಣಪತಿ ಹೋಮ, ನಾಗತಂಬಿಲ, ಸಾರ್ವಜನಿಕ ಆಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ದೈವಗಳ ಸನ್ನಿಧಿಯಲ್ಲಿ ಕಲಶ ತಂಬಿಲ ಸೇವೆ, ಮಹಾಲಿಂಗೇಶ್ವರ ದೇವರ ಕಟ್ಟೆಯ ಕಲಶ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಕೊರೊನಾ ನಿಯಮಾವಳಿಯಂತೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಈ ಬಾರಿ ಅಪರಾಹ್ನ 2.30ಕ್ಕೆ ಶ್ರೀ ದೈವಗಳ ಭಂಡಾರ ತೆಗೆದು ಮುoಡ್ಯತ್ತಾಯ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ. ಪೂರ್ವಶಿಷ್ಠ ಸಂಪ್ರದಾಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪುರುಷೋತ್ತಮ ನಾಯಕ್ , ಸರೋಜಿನಿ ಎಸ್. ಅಭಿಕಾರ, ಆನಂದ ಗೌಡ, ಜಯಶಂಕರ ರೈ ಉಪಸ್ಥಿತರಿದ್ದರು.