ಪುತ್ತೂರು : ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ತಾಲೂಕು ಸಮಿತಿ ಅಧ್ಯಕ್ಷರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಕುರಿತು ತನ್ನ ವಿರುದ್ಧ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಗೆಜ್ಜೆಗಿರಿ ಆಡಳಿತ ಮಂಡಳಿ ಅಧ್ಯಕ್ಷ ಜಯಂತ್ ನಡುಬೈಲು ಸ್ಪಷ್ಟನೆ ನೀಡಿದ್ದಾರೆ.
ಫೆ. 12ರಂದು ನಾನು ಪುತ್ತೂರಿನಲ್ಲಿಯೇ ಇದ್ದು ಹಾಗಿದ್ದರೂ ಶ್ರೀ ಕ್ಷೇತ್ರ ನಂದನಬಿತ್ತಿಲ್ ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ ಅವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೋಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂದರ್ಭ ಅಲ್ಲಿ ಪೋಲೀಸರು ಕೂಡ ಇದ್ದರು, ವೀಡಿಯೊ ದಾಖಲೆಗಳು ಕೂಡಾ ಇದೆ.. ಅದನ್ನು ನೋಡಿದರೆ ವಾಸ್ತವ ಸಂಗತಿ ತಿಳಿಯುತ್ತದೆ, ನಾನು ಕಳ್ಳ ಎಂದು ಆರೋಪಿಸಲಾಗಿದೆ, ಆದರೆ ನಾನು ಆ ಪದವನ್ನು ಬಳಸಿಲ್ಲ, ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಿದ್ದಾರೆ. ನಾನು ಕನಸಲ್ಲಿಯೂ ಇಂತಹ ದುರಾಲೋಚನೆ ಮಾಡಿದವನಲ್ಲ, ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣಕ್ಕೆ ಬರಲು ಸಿದ್ಧನಾದ್ದೇನೆ ಎಂದು ಹೇಳಿದ್ದಾರೆ..