Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು..!

    ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು..!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಉಪ್ಪಿನಂಗಡಿ: ಬಾರ್ ಬಳಿ ಕುಸಿದು ಬಿದ್ದು ಪುತ್ತೂರು ನಿವಾಸಿ ಮೃತ್ಯು : ದೂರು..!

    ಪುತ್ತೂರಿನಲ್ಲಿ ಸ್ಕೂಟರ್–ಆಟೋ ರಿಕ್ಷಾ ಡಿಕ್ಕಿ: ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು..!!

    ಪುತ್ತೂರಿನಲ್ಲಿ ಸ್ಕೂಟರ್–ಆಟೋ ರಿಕ್ಷಾ ಡಿಕ್ಕಿ: ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಚರ್ಚ್‌ನಲ್ಲಿ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಫಾದರ್ ವಿರುದ್ಧ ಮಂಗಳೂರಿನಲ್ಲಿ ಪ್ರಕರಣ ದಾಖಲು..!!

    ಸುಳ್ಯ ಬಿಇಒ ಕಚೇರಿ ಅಧೀಕ್ಷಕ ಪುತ್ತೂರು ನಿವಾಸಿ ಶಿವಪ್ರಸಾದ್‌ ಜಿ.ಎಸ್ ಹೃದಯಾಘಾತದಿಂದ ನಿಧನ..!!!

    ಸುಳ್ಯ ಬಿಇಒ ಕಚೇರಿ ಅಧೀಕ್ಷಕ ಪುತ್ತೂರು ನಿವಾಸಿ ಶಿವಪ್ರಸಾದ್‌ ಜಿ.ಎಸ್ ಹೃದಯಾಘಾತದಿಂದ ನಿಧನ..!!!

    ಪುತ್ತೂರು: ಕಾರಿಗೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ಮಗುಚಿಬಿದ್ದ ಲಾರಿ, ಸಂಚಾರ ಅಸ್ತವ್ಯಸ್ತ..!

    ಪುತ್ತೂರು: ಕಾರಿಗೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ಮಗುಚಿಬಿದ್ದ ಲಾರಿ, ಸಂಚಾರ ಅಸ್ತವ್ಯಸ್ತ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಹಿರಿಯ ಯಕ್ಷಗಾನ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್ ಭಂಡಾರಿ ಪುತ್ತೂರು ಇನ್ನಿಲ್ಲ

February 19, 2021
in ಪುತ್ತೂರು
0
ಹಿರಿಯ ಯಕ್ಷಗಾನ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್ ಭಂಡಾರಿ ಪುತ್ತೂರು ಇನ್ನಿಲ್ಲ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಬಾನಂಗಳದ ಧ್ರುವತಾರೆ..ಧರ್ಮಸ್ಥಳ ಮೇಳದ ಯಕ್ಷಗಾನ ಮೇಳದ ಹಿರಿಯ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಂಡುವೇಷದ ಗಂಡುಗಲಿ ದಿಗಿಣ ವೀರ ಡಾ.ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ.

Advertisement
Advertisement

Advertisement

ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶ್ರನ್ನು ಅಗಲಿದ್ದಾರೆ.

Advertisement

೧೯೪೫ ನೇ ಇಸವಿಯಲ್ಲಿ ಜನನ. ತಂದೆ ಶೀನಪ್ಪ ಭಂಡಾರಿ ಹಾಗೂ ತಾಯಿ ಸುಂದರಿಯವರ ಸುಪುತ್ರ. ಇವರ ತಂದೆ, ತಾತ, ಮಾವಂದಿರೆಲ್ಲರೂ ಯಕ್ಷಗಾನ ಪರಂಪರೆಗೆ ಸೇರಿದವರು. ಈ ಕಲೆ ಬಳುವಳಿಯಾಗಿ ಪಡೆದ ಡಾ. ಶ್ರೀಧರ ಭಂಡಾರಿಗಳು ತಮ್ಮ ಜೀವನವನ್ನು ಇದೇ ಕ್ಷೇತ್ರಕ್ಕೆ ಮುಡಿಪಾಗಿಟ್ಟವರು.

ಯಕ್ಷಗಾನದ ಮೂಲಪಾಠವನ್ನು ತಂದೆಯವರಿಂದ ಕಲಿತು ನಂತರ ಕುರಿಯ ವಿಠ್ಠಲ ಶಾಸ್ತ್ರಿಗಳು, ಹೊಸ ಹಿತ್ಲು ಮಾಲಿಂಗ ಭಟ್ಟರು ಮೊದಲಾದ ದಿಗ್ಗಜರಿಂದ ಯಕ್ಷಕಲೆಯ ಮತ್ತಷ್ಟುನ್ನು ಕಲಿತರು. ಗೋವಿಂಧ ಭಟ್ಟರು, ನಾರಾಯಣ ಭಟ್ಟರು ಹೀಗೆ ಹಲವು ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿ ಯಕ್ಷ ಕಲೆಯನ್ನು ಮೈಗೂಡಿಸಿಕೊಂಡರು ಡಾ. ಶ್ರೀಧರ ಭಂಡಾರಿಗಳು.ಯಕ್ಷಗಾನದ ಜೊತೆಗೆ ದಿ| ಕುದ್ಕಾಡಿ ವಿಶ್ವನಾಥ ರೈಗಳಿಂದ ಭರತನಾಟ್ಯವನ್ನೂ ಕಲಿತು, ಕುರಿಯ ವಿಠ್ಠಲ ಶಾಸ್ತ್ರಿಗಳಿಂದ ಯಕ್ಷಗಾನ ಅಭಿವ್ಯಕ್ತಿಯ ಆಂಗಿಕ ಅಭಿನಯದ ಪಾಠ ಹೇಳಿಸಿಕೊಂಡಿದ್ದಾರೆ.

ಹೀಗೇ ಯಕ್ಷಕಲಾವಿದರೊಂದಿಗೆ ತಿರುಗಾಟ ಮಾಡುತ್ತಲೇ ಯಕ್ಷಕಲೆಯನ್ನು ಅಭ್ಯಾಸ ಮಾಡಿದ ಡಾ. ಶ್ರೀಧರ ಭಂಡಾರಿಗಳು ೧೯೬೦ನೇ ಇಸವಿಯಲ್ಲಿ ಯಕ್ಷಕ್ಷೇತ್ರಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದರು.ಸುಮಾರು ೨-೩ ವರ್ಷಗಳ ಕಾಲ ತಮ್ಮ ತಂದೆಯವರೊಡನೆ ಸುಬ್ರಮ್ಮಣ್ಯ ಮೇಳ, ಬಳ್ಳಂಬೆಟ್ಟು ಮೇಳಗಳಲ್ಲಿ ತಿರುಗಾಟ ಮಾಡಿದರು. ಅದು ಯಕ್ಷಗಾನ ಬಹಳ ಬಡವಾಗಿದ್ದ ಕಾಲ. ದೊಂದಿ ಬೆಳಕು, ಗ್ಯಾಸ್ ಲೈಟ್‌ಗಳ ಬೆಳಕಿನಲ್ಲೇ ಯಕ್ಷಗಾನ ನಡೆಯುತ್ತಿತ್ತು. ಪ್ರಯಾಣಕ್ಕೂ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ, ಯಕ್ಷಗಾನದ ವೇಷ-ಭೂಷಣ, ಮೇಳದ ಪರಿಕರಗಳೊಡನೆ ಒಂದೂರಿನಿಂದ ಮತ್ತೊಂದೂರಿಗೆ ನಡೆದೇ ಸಾಗಿ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದರು.ದಕ್ಷಿಣ ಕನ್ನಡದ ಹೆಗ್ಗುರುತಾಗಿರುವ ಯಕ್ಷಕಲೆಯನ್ನು ಡಾ. ಶ್ರೀಧರ ಭಂಡಾರಿಯಾದಿಯಾಗಿ ಅವರ ಒಡನಾಡಿಗಳು ಬೆಳೆಸಿಕೊಂಡು ಬಂದರು.

ಭವಿಷ್ಯದಲ್ಲಾದರೂ ಯಕ್ಷಕಲೆಯ ಶ್ರೀಮಂತಿಕೆ ನಮ್ಮನ್ನು ಕಾಪಾಡಬಹುದು ಎಂದು ನಂಬಿ ಪ್ರತಿದಿನವೂ ಸಾಧನೆ ಮಾಡಿ ಈ ಕಲೆಯನ್ನು ಉಳಿಸಿಕೊಂಡು ಬಂದ ಹಲವು ಹಿರಿಯ ತಲೆಮಾರಿನ ಕಲಾವಿದರಲ್ಲಿ ಶ್ರೀಧರ ಭಂಡಾರಿಗಳೂ ಸೇರಿದ್ದಾರೆ. ರಂಗದಲ್ಲಿ ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಮಾಡುವ ಸಾಧನೆಗೆ ತಕ್ಕ ಪ್ರತಿಫಲ ಒಂದಲ್ಲಾ ಒಂದು ದಿನ ಸಿಕ್ಕೇ ಸಿಗುತ್ತದೆ ಎಂದು ನಂಬಿದ್ದ ಕಲಾವಿದ ವರ್ಗ ಅಂದು ಬಹಳ ದೊಡ್ಡ ಪ್ರಮಾಣದಲ್ಲಿತ್ತು.

ಯಕ್ಷಗಾನ ಕ್ಷೇತ್ರದಲ್ಲಿ ಅಭಿಮನ್ಯು, ಬಬ್ರುವಾಹನ, ಕೃಷ್ಣ, ಭಾರ್ಗವ ಹೀಗೆ ಹಲವು ಪಾತ್ರಗಳಿಗೆ ಮಾರ್ಗದರ್ಶಕ ರೂಪವಾಗಿದ್ದ ಕುರಿಯ ವಿಠ್ಠಲ ಶಾಸ್ತ್ರಿಗಳು, ಕೃಷನ್ ಬಾಬು ಹೀಗೆ ಹಲವು ಹಿರಿಯರ ಅಭಿವ್ಯಕ್ತಿಯನ್ನು ಅಳವಡಿಸಿಕೊಂಡು ಬೆಳೆಸಿದವರಲ್ಲಿ ಶ್ರೀಧರ ಭಂಡಾರಿಯವರು ಪ್ರಮುಖರು. ಮುಂದಿನ ತಲೆಮಾರಿನ ಕಲಾವಿದರಿಗೆ ಕುರಿಯ ವಿಠ್ಠಲ ಶಾಸ್ತ್ರಿಗಳಂತೆ ಆದರ್ಶ ಪ್ರಾಯರಾಗಿ ಬೆಳೆಯಬೇಕು ಎಂಬ ಹೆಬ್ಬಕೆಯಿಂದ ಯಕ್ಷಸೇವೆ ಮಾಡಿದ್ದಾರೆ ೧೯೬೭ ರಿಂದಲೇ ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ, ಜೊತೆಗೆ ದುಬೈ, ಬೆಹರೈನ್, ಲಂಡನ್, ಜಪಾನ್, ಟೊಕಿಯೋ, ಅಮೇರಿಕದಂತಹ ದೇಶಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ ಹೆಮ್ಮೆ ಇವರದ್ದು.

. ಯಕ್ಷಲೋಕದಲ್ಲಿ ಡಾ. ಶ್ರೀಧರ ಭಂಡಾರಿಯವರಿಗೆ ಅವರದ್ದೇ ಆದ ಹೆಸರಿದೆ. ಮುಂದೆ ತಮ್ಮದೇ ಆದ ಯಕ್ಷಗಾನ ತಂಡ ಕಟ್ಟಿಕೊಂಡು ಮೈಸೂರು, ಬೆಂಗಳೂರು, ಮುಂಬೈ ಜೊತೆಗೆ ವಿದೇಶಗಳಿಗೂ ಹೋಗಿ ಪ್ರದರ್ಶನ ಕೊಟ್ಟು ಬಂದ ಹೆಗ್ಗಳಿಕೆ ಇವರಿಗಿದೆ.ಡಾ. ಶ್ರೀಧರ ಭಂಡಾರಿಯವರು ಯಕ್ಷಗಾನಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಮುಂಬೈ ಬಂಟರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ. ಶಿವರಾಮ ಕಾರಂತ ಪ್ರಶಸ್ತಿಯೂ ಬಂದಿದೆ. ಜೊತೆಗೆ ಉಡುಪಿ ಪೇಜಾವರ ಶ್ರೀ, ಎಡನೀರು ಸ್ವಾಮಿಗಳು, ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆಯವರಿಂದಲೂ ಗೌರವ-ಪ್ರಶಸ್ತಿಗಳು ಸಂದಿವೆ.

Previous Post

ಹಿಂದೂ ಜಾಗರಣಾ ವೇದಿಕೆ ವೀರಮಂಗಲ ವತಿಯಿಂದ ಮನೆ ಮನಗಳಿಗೂ ಭಗವದ್ಗೀತೆ ಅಭಿಯಾನ

Next Post

ಗೆಜ್ಜೆಗಿರಿ ಕ್ಷೇತ್ರದಲ್ಲಿ ಹಲ್ಲೆ ಬೆದರಿಕೆ ತನ್ನ ವಿರುದ್ಧ ಸುಳ್ಳು ಆರೋಪ – ಜಯಂತ ನಡುಬೈಲು ಸ್ಪಷ್ಟನೆ

OtherNews

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಉಪ್ಪಿನಂಗಡಿ: ಬಾರ್ ಬಳಿ ಕುಸಿದು ಬಿದ್ದು ಪುತ್ತೂರು ನಿವಾಸಿ ಮೃತ್ಯು : ದೂರು..!

October 17, 2026
ಪುತ್ತೂರಿನಲ್ಲಿ ಸ್ಕೂಟರ್–ಆಟೋ ರಿಕ್ಷಾ ಡಿಕ್ಕಿ: ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು..!!
Featured

ಪುತ್ತೂರಿನಲ್ಲಿ ಸ್ಕೂಟರ್–ಆಟೋ ರಿಕ್ಷಾ ಡಿಕ್ಕಿ: ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು..!!

October 16, 2026
ಸುಳ್ಯ ಬಿಇಒ ಕಚೇರಿ ಅಧೀಕ್ಷಕ ಪುತ್ತೂರು ನಿವಾಸಿ ಶಿವಪ್ರಸಾದ್‌ ಜಿ.ಎಸ್ ಹೃದಯಾಘಾತದಿಂದ ನಿಧನ..!!!
ಕ್ರೈಮ್

ಸುಳ್ಯ ಬಿಇಒ ಕಚೇರಿ ಅಧೀಕ್ಷಕ ಪುತ್ತೂರು ನಿವಾಸಿ ಶಿವಪ್ರಸಾದ್‌ ಜಿ.ಎಸ್ ಹೃದಯಾಘಾತದಿಂದ ನಿಧನ..!!!

October 16, 2026
ಪುತ್ತೂರು: ಕಾರಿಗೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ಮಗುಚಿಬಿದ್ದ ಲಾರಿ, ಸಂಚಾರ ಅಸ್ತವ್ಯಸ್ತ..!
Featured

ಪುತ್ತೂರು: ಕಾರಿಗೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ಮಗುಚಿಬಿದ್ದ ಲಾರಿ, ಸಂಚಾರ ಅಸ್ತವ್ಯಸ್ತ..!

October 15, 2026
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಕ್ರೈಮ್

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ : ಸಂತ್ರಸ್ತೆಗೆ ರೂ.6 ಲಕ್ಷ ಪರಿಹಾರ..!!

October 15, 2026
ವಿಟ್ಲ: ಕಳ್ಳತನ ಪ್ರಕರಣದ ಆರೋಪಿ ಬಂಧನ..!
Featured

ವಿಟ್ಲ: ಕಳ್ಳತನ ಪ್ರಕರಣದ ಆರೋಪಿ ಬಂಧನ..!

October 15, 2026

Leave a Reply Cancel reply

Your email address will not be published. Required fields are marked *

Recent News

ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು..!

ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು..!

October 17, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಉಪ್ಪಿನಂಗಡಿ: ಬಾರ್ ಬಳಿ ಕುಸಿದು ಬಿದ್ದು ಪುತ್ತೂರು ನಿವಾಸಿ ಮೃತ್ಯು : ದೂರು..!

October 17, 2026
ಪುತ್ತೂರಿನಲ್ಲಿ ಸ್ಕೂಟರ್–ಆಟೋ ರಿಕ್ಷಾ ಡಿಕ್ಕಿ: ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು..!!

ಪುತ್ತೂರಿನಲ್ಲಿ ಸ್ಕೂಟರ್–ಆಟೋ ರಿಕ್ಷಾ ಡಿಕ್ಕಿ: ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು..!!

October 16, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಮಹಿಳೆ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣ: ಆರೋಪಿಗಳಿಗೆ ಜೈಲು ಶಿಕ್ಷೆ..!!

October 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.