ವಿಟ್ಲ: ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ವರ ಆಗಮಿಸಿದ ಘಟನೆಯ ವಿರುದ್ಧ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರು ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕರು, “ಹಿಂದೂ ಸಮಾಜದ ಆರಾಧ್ಯ ಶಕ್ತಿ ಕೊರಗಜ್ಜ ದೈವವನ್ನು ಬಂಟ್ವಾಳ ಕೊಳ್ನಾಡಿನ ಮದುವೆ ಮನೆಯಲ್ಲಿ ವಿಕೃತವಾಗಿ ನಿಂದಿಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಮಾನಸಿಕತೆ ಇರುವ ವಿಕೃತ ಮನಸ್ಸಿನ ಮತಾಂಧರನ್ನ ಸಮಾಜದ ಮತ ಮೌಲ್ವಿಗಳು ಹದ್ದುಬಸ್ತಿನಲ್ಲಿಡದಿದ್ದರೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬರಲಿದೆ” ಎಂದಿದ್ದಾರೆ..