ವಿಟ್ಲ: ಮದುವೆ ಎಂಬುದು ಮಾನವ ಜನ್ಮದಲ್ಲಿ ಹುಟ್ಟಿದ ಮನುಷ್ಯನ ಜೀವನದಲ್ಲಿ ಪ್ರಮುಖ ಘಟ್ಟ. ಆದರೆ ಸಂಸ್ಕೃತಿ ಹೀನನೊಬ್ಬ ಅದ್ಯಾವ ಲೋಕದಲ್ಲಿ ಇದ್ದೇನೆಂಬುದು ಆತನಿಗೇ ಗೊತ್ತಿರೋದಿಲ್ಲ. ತಾನು ಆಡಿದ್ದೇ ಆಟ..ತಾನು ನಡೆದಿದ್ದೇ ಧರ್ಮ. ಅಂದುಕೊಂಡವಗೆ ಅಹಂಕಾರ ಎನ್ನಬೇಕೋ…ಬುದ್ಧಿಹೀನ ಅನ್ನಬೇಕೋ ಜನರೇ ತೀರ್ಮಾನಿಸಬೇಕು.
ಮದುವೆ ಸಮಾರಂಭ ಮುಗಿದು 24 ಗಂಟೆಯಲ್ಲೇ ವಿಲನ್ ಆಗಿರೋದು ಸಾಲೆತ್ತೂರಿನ ಅಝೀಝ್ ರವರ ಅಳಿಯ ಉಪ್ಪಳದ ಉಮರುಲ್ ಬಾಷಿತ್.
ಮದುವೆ ದಿನ ರಾತ್ರಿ ಪ್ರಥಮ ರಾತ್ರಿ ಆಚರಿಸಲು ತನ್ನ ಅಭಿಮಾನಿ ಬಳಗದೊಂದಿಗೆ ಬಂದ ಈತ ಅದ್ಯಾವ ಉದ್ಧೇಶ ಇಟ್ಕೊಂಡಿದ್ದನೋ ಭಗವಂತನೇ ಬಲ್ಲ. ಈತನ ಪಟಾಲಂನ ಹುಚ್ಚಾಟಕ್ಕೆ ಮೊದಲು ಹುಕ್ಕಾ ನಶೆ ತೆಗೆದುಕೊಳ್ತಾ ತುಳುನಾಡಿನ ಆರಾಧ್ಯ ದೈವದ ವೇಷ ಭೂಷಣಕ್ಕಾಗಿ ಮುಖಕ್ಕೆ ಮಸಿ ಬಳಿಯುತ್ತಾನೆ. ತನ್ನ ಚೇಲಾಗಳೆಲ್ಲರೂ ಹುಕ್ಕಾ ನನಶೆಯೇರಿದ ಬಳಿಕ ಸಾಲೆತ್ತೂರಿನ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿದ್ದಾರೆ ಎನ್ನಲಾಗಿದೆ.
ಮಾಡಬಾರದ ಕೆಲಸ ಮಾಡಿ ಇದೀಗ ತಾನೂ ಕೆಟ್ಟ..ತನಗೆ ಹೆಣ್ಣು ಕೊಟ್ಟ ಅಝೀಝ್ ಕುಟುಂಬದ ಮಾನವನ್ನೂ ಹರಾಜು ಹಾಕಿದಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯಿಸುತ್ತಿದ್ದಾರೆ.
ಹುಕ್ಕಾ ನಶೆಯ ಮೋಜಿನಲ್ಲಿ ಕೊರಗಜ್ಜ ದೈವದ ಬಣ್ಣ ಬಳಿಯುತ್ತಿರುವ ವೈರಲ್ ಎಕ್ಸ್ಕ್ಲೂಸಿವ್ ವೀಡಿಯೋ ಇಲ್ಲಿದೆ..👇👇