ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲಿನಲ್ಲಿ ನಡೆಯುವ ಐದು ದಿನಗಳ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಕ್ಷೇತ್ರದ ಆದಿದೈವ ಧೂಮಾವತಿ ಸಾನಿಧ್ಯದಲ್ಲಿ ಶುಕ್ರವಾರ ಧ್ವಜಾರೋಹಣ ನಡೆಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ಮೊದಲು ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಪ್ರಧಾನ ಅರ್ಚಕರಾದ ಶಿವಾನಂದ ಶಾಂತಿ ಅವರ ನೇತೃತ್ವದಲ್ಲಿ ನಡೆಯಿತು.ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಅಧ್ಯಕ್ಷರಾದ ಜಯಂತ ನಡುಬೈಲ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರದ ನಾಗ ಸಾನಿಧ್ಯದಲ್ಲಿ ಕ್ಷೀರಾಭಿಷೇಕ ಈ ಸಂದರ್ಭದಲ್ಲಿ ನಡೆಯಿತು. ಸಂಜೆ ಧೂಮಾವತಿ ದೈವದ ಬಲಿ ಉತ್ಸವ ನಡೆಯಲಿದ್ದು, ಶನಿವಾರ ಬೆಳಿಗ್ಗೆ ಧೂಮಾವತಿ ನೇಮೋತ್ಸವ, ರಾತ್ರಿ ಕುಪ್ಪೆ ಪಂಜುರ್ಲಿ ನೇಮೋತ್ಸವ ನಡೆಯಲಿದೆ. ಮಾಚ್೯ ಒಂದರಂದು ರಾತ್ರಿ ಕೋಟಿ ಚೆನ್ನಯ ಮೂಲಸ್ಥಾನ ಗರಡಿ ನೇಮೋತ್ಸವ, ಮಾಚ್೯ ಎರಡರಂದು ಬೆಳಿಗ್ಗೆ ದೇಯಿ ಬೈದ್ಯೆತಿ ನೇಮೋತ್ಸವ ನಡೆಯಲಿದೆ.