ಪುತ್ತೂರು; ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿಯನ್ನೇ ನಿರಂತರವಾಗಿ ಎರಡು ದಿನ ಅತ್ಯಾಚಾರ ಮಾಡಿದ ಪೈಶಾಚಿಕ ಘಟನೆ ಕೆದಂಬಾಡಿ ಗ್ರಾಪಂ ವ್ಯಾಪ್ತಿಯ ಕುಂಬ್ರ ಸಮೀಪದ ಕುರಿಕ್ಕಾರ ಎಂಬಲ್ಲಿ ನಡೆದಿದೆ.
ಕುರಿಕ್ಕಾರ ನಿವಾಸಿ ಜಯರಾಮ ರೈ ತಾಯಿಯನ್ನು ಅತ್ಯಾಚಾರಗೈದ ಪಾಪಿ ಪುತ್ರ. ಜಯರಾಮ ಮತ್ತು ಆತನ ವೃದ್ದೆ ತಾಯಿ ಕುರಿಕ್ಕಾರದ ಮನೆಯಲ್ಲಿ ವಾಸ್ತವ್ಯವಿದ್ದರು. ದಿನಾ ಕುಡಿದು ಮನೆಗೆ ಬರುತ್ತಿದ್ದ ಮತ್ತು ದಿನಪೂರ್ತಿ ಮದ್ಯದ ಅಮಲಿನಲ್ಲೇ ಮನೆಯಲ್ಲೇ ಇರುತ್ತಿದ್ದ . ಜ..12 ರಂದು ರಾತ್ರಿ ಊಟ ಮಾಡಿ ತಾಯಿ ಮತ್ತು ಮಗ ಮಲಗಿದ್ದರು. ಅದೇ ದಿನ ಸುಮಾರು ಮೂರು ಗಂಠೆಯ ರಾತ್ರಿ ತಾಯಿಯನ್ನು ಎತ್ತಿಕೊಂಡು ಪಕ್ಕದ ಕೋಣೆಗೆ ಬಂದ ಮಗ ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಆ ವೇಳೆ ತಾಯಿ ಬೊಬ್ಬೆ ಹಾಕಿದ್ದಾರೆ. ಬೊಬ್ಬೆ ಹಾಕಿದ್ದು ನೆರೆಮನೆಯವರಿಗೆ ಕೇಳಿಸಿದರೆ ಸಮಸ್ಯೆಯಾಗಬಹುದು ಎಂದು ತಾಯಿಯ ಬಾಯಿಗೆ ಬಟ್ಟೆ ತುರುಕಿದ್ದಾನೆ.
ಮಗಾ.. ಮಗಾ ಎಂದು ತಾಯಿ ಪರಿಯಾಗಿ ಬೇಡಿಕೊಂಡರೂ ಬಿಡದ ಪಾಪಿ ಮಗ ತಾಯಿಯನ್ನು ಅತ್ಯಾಚಾರ ಮಾಡಿದ್ದಾನೆ. ಇದಾದ ಬಳಿಕ ಜ.. 13 ರಂದು ಬೆಳಿಗ್ಗೆ 7.45 ರ ಸಮಯಕ್ಕೆ ತಾಯಿ ಮಗನಿಗಾಗಿ ಚಾ ರೆಡಿ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಮಗ ತಾಯಿಯನ್ನು ಎತ್ತಿಕೊಂಡು ಮನೆಯ ಹೊರಗಡೆ ಇರುವ ಹಾಲ್ ಒಂದಕ್ಕೆ ಎತ್ತಿಕೊಂಡು ಹೋಗಿದ್ದಾನೆ. ಆ ವೇಳೆ ಬೊಬ್ಬೆ ಹಾಕಿದಾಗಲೂ ಬಟ್ಟೆ ತುರುಕಿದ್ದಾನೆ. ಬಳಿಕ ಅತ್ಯಾಚಾರ ಮಾಡಿದ್ದಾನೆ. ಯಾರಿಗಾದರೂ ಈ ವಿಷಯವನ್ನು ಹೇಳಿದರೆ ಕೊಂದು ಬಿಡುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ.
ಎರಡು ದಿನ ನಿರಂತರ ನಡೆದ ಅತ್ಯಾಚಾರದಿಂದ ಅಸ್ವಸ್ಥಗೊಂಡ ತಾಯಿ ಆಸ್ಪತ್ರೆಗೆ ದಾಖಲಾಗಿ ತನ್ನ ಮಗನ ವಿರುದ್ದ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ವೃದ್ದೆ ತಾಯಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕೆದಂಬಾಡಿ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ ಎಲ್ಲೋ ಇಂಥಹ ಘಟನೆಗಳು ನಡೆಯಿತು ಎಂದು ಕೇಳಿ ಅನುಭವ ಇದ್ದ ಜನರಿಗೆ ಶುಕ್ರವಾರ ಮುಂಜಾನೆ ಶಾಕ್ ನ್ಯೂಸ್ ಸಿಕ್ಕಿತ್ತು. ತಾಯಿಯ ಅತ್ಯಾಚಾರ ಮಡಿದ ಮಗನಿಗೆ ಗ್ರಾಮದ ಜನತೆ ಹಿಡಿ ಶಾಪ ಹಾಕುತ್ತಿದ್ದ ದೃಶ್ಯವೂ ಕಂಡು ಬಂತು.
ಪಿಂಚಣಿಗಾಗಿ ತಾಯಿಯನ್ನು ಕರೆದುಕೊಂಡು ಬರುತ್ತಿದ್ದ :ಪಿಂಛಣಿ ಮೊತ್ತ ಪಡೆಯಲು ತಾಯಿಯನ್ನು ಅಂಚೆ ಕಚೇರಿಗೆ ಕರೆದುಕೊಂಡು ಬರುತ್ತಿದ್ದ ಜಯರಮ ಹಣ ಕೈಗೆ ಸಿಕ್ಕಿದ ಬಳಿಕ ನಡೆಯಲು ಸಾಧ್ಯವಾಗದ ತಾಯಿಯನ್ನು ಎಳೆದುಕೊಂಡೇ ಹೋಗುತ್ತಿದ್ದ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಆ ತಾಯಿಗೆ ಇಬ್ಬರು ಮಕ್ಕಳಿದ್ದಾರೆ. ಜಯರಾಮ ತಾಯಿಯ ಜೊತೆಯೇ ವಾಸವಾಗಿದ್ದು ಈತನ ಹೆಂಡತಿ ಜೊತೆಗಿಲ್ಲ. ನಡೆಯಲು ಸಾಧ್ಯವಾಗದ, ಕೂತರೆ ಏಳಲು ಸಾಧ್ಯವಾಗದ ತಾಯಿ ಈ ಪಾಪಿ ಮಗನಿಗೆ ಮೂರು ಹೊತ್ತು ಅನ್ನ ಬೇಯಿಸಿ ಕೊಡುತ್ತಿದ್ದಳು. ಎದೆಹಾಲು ಕುಡಿದ ಮಗನೇ ಎದೆಯ ಮೇಲೆ ಕುಳಿತು ತಾಯಿಗೆ ಮಾಡಬಾರದ ಪಾಪವನ್ನು ಮಾಡಿ ಜೈಲು ಸೇರಿದ್ದಾನೆ. ತಾಯಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಗ್ರಾಮಾಂತರ ಭಾಗದಲ್ಲಿ ಇದೇ ಮೊದಲು ಎನ್ನಲಾಗಿದೆ.