ಕಡಬ: ಯುವತಿಯೊಬ್ಬಳು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದಿಂದ ವರದಿಯಾಗಿದೆ. ಕೋಡಿಂಬಾಳ ಗ್ರಾಮದ ಗಾಣದಗುಂಡಿ ನಿವಾಸಿ ರಮೇಶ್ ಎಂಬವರ ಪುತ್ರಿ ದಿವ್ಯಾ(22) ನಾಪತ್ತೆಯಾದ ಯುವತಿಯಾಗಿದ್ದಾಳೆ.
ಬುಧವಾರದಂದು ಮನೆಯಿಂದ ಹೊರ ಹೋದ ಯುವತಿ ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ಸಂಬಂಧಿಕರಲ್ಲಿ ಹಾಗೂ ನೆರೆ ಹೊರೆಯವರಲ್ಲಿ ವಿಚಾರಿಸಿದಾಗ ಯಾವುದೇ ಸುಳಿವು ಪತ್ತೆಯಾಗದ ಕಾರಣ ಆಕೆಯ ತಂದೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.