ವಿಟ್ಲ: ಮನೆಯೊಂದರ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ ನಗದು, ಮದ್ಯ ವಶಪಡಿಸಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.
ಜ.15 ರಂದು ವಿಟ್ಲ ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿಯವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಅಳಿಕೆ ಗ್ರಾಮದ ಕುದ್ದುಪದವು ಎಂಬಲ್ಲಿ ವ್ಯಕ್ತಿಯೊಬ್ಬರ ಮನೆಯ ಪಕ್ಕದ ಕೋಣೆಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಂಜೆ ವೇಳೆಗೆ ದಾಳಿ ನಡೆಸಿದ್ದರು.
ಬೆಂಗಳೂರು ವಿಸ್ಕಿ 90 ಎಂಎಲ್ ಮದ್ಯ ತುಂಬಿರುವ 40 ಪ್ಯಾಕೆಟ್, ಒರಿಜಿನಲ್ ಚಾಯಿಸ್ 90 ಎಂಎಲ್ ಮದ್ಯ ತುಂಬಿರುವ 19 ಪ್ಯಾಕೆಟ್, ಓರಿಜಿನಲ್ ಚಾಯಿಸ್ 180
ಎಂಎಲ್ ಮದ್ಯ ತುಂಬಿರುವ 40 ಪ್ಯಾಕೆಟ್, ಪ್ರೆಸ್ಟೀಜ್ ವಿಸ್ಕಿ 90 ಎಂಎಲ್ ಮದ್ಯ ತುಂಬಿರುವ 50 ಪ್ಯಾಕೆಟ್, ಪ್ರೆಸ್ಟಿಜ್ ವಿಸ್ಕಿ 180 ಎಂಎಲ್ ಮದ್ಯ ತುಂಬಿರುವ 29 ಪ್ಯಾಕೆಟ್, ಮೈಸೂರ್ ಲ್ಯಾನ್ಸರ್ 90 ಎಂಎಲ್ ಮದ್ಯ ತುಂಬಿರುವ 30 ಪ್ಯಾಕೆಟ್ ಸೇರಿದಂತೆ ಅಂದಾಜು 10,493 ರೂ. ಮೌಲ್ಯದ 24.93 ಲೀಟರ್ ಮದ್ಯ ಹಾಗೂ ಮದ್ಯ ಮಾರಾಟದಿಂದ ಆರೋಪಿ ವಶದಲ್ಲಿದ್ದ 14,193 ರೂ. ನಗದು ವಶ ಪಡಿಸಿಕೊಂಡು ಆರೋಪಿಯನ್ನು ಬಂಧಿಸಿ
ಪ್ರಕರಣ ದಾಖಲಿಸಿಕೊಂಡಿದ್ದಾರೆ.