ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ತೆಂಕಿಲದ ನರೇಂದ್ರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ತೆಂಕಿಲದ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ಬಾಲಕರ ವಿಭಾಗದ ತಂಡದಲ್ಲಿ ವಿದ್ಯಾರ್ಥಿಗಳಾದ ಅನಿಕೇತ್ ಬದನಾಜೆ, ಮಿಥುನ್ ಜಿ.ಪಿ, ಚೇತನ್, ತರುಣ್ ಕುಮಾರ್, ಭಗತ್ ಎಚ್ ಎನ್, ತನುಜ್, ಚರಣ್, ಸಾತ್ವಿಕ್, ಚಿರಾಗ್ ಶೆಟ್ಟಿ, ಪ್ರೀತೇಶ್ ಕುಮಾರ್, ಸಂತೋಷ್ ಬಿ, ರೋಹನ್ ಸಿ, ದಿತಿನ್ ಬಿ ಭಾಗವಹಿಸಿದ್ದರು.ಬಾಲಕಿಯರ ತಂಡದಲ್ಲಿ ವಿದ್ಯಾರ್ಥಿಗಳಾದ ಚೈತ್ರ, ದುರ್ಗಾಶ್ರೀ, ಚಾಂದಿನಿ ಎಸ್ ಪಿ, ಶ್ರೀಜನ ಕೆ, ಪ್ರಜ್ಞಾ ಎಸ್, ಎಂ. ಎಸ್ ದೀಪಾಲಿ, ವಿದ್ಯಾ, ಪೂರ್ಣಿಮ ಎಸ್, ಸಿಂಚನಾ, ರಕ್ಷಾ ಜಿ, ಶ್ರೀರಕ್ಷಾ ಭಾಗವಹಿಸಿದ್ದರು.ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ| ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.