ಪುತ್ತೂರು: ಕೆಲ ವರ್ಷಗಳ ಹಿಂದೆ ಏಳ್ಮುಡಿಯಲ್ಲಿ ಉದಯ ಸೂರ್ಯ ಎಂಟರ್‌ಪ್ರೈಸಸ್ ಮಳಿಗೆ ನಡೆಸುತ್ತಿದ್ದ ಜಿ.ಎಸ್.ಸಲ್ಡಾನಾ (82) ಅಲ್ಪಕಾಲದ ಅಸೌಖ್ಯದಿಂದಾಗಿ ಜ.19 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸಲ್ಡಾನಾ ರವರು ಆರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ಡಿಪೋದಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನಂತರ ಉದ್ಯೋಗ ತ್ಯಜಿಸಿ ವ್ಯಾಪಾರಕ್ಕಿಳಿದಿದ್ದರು.
ಉದಯ ಸೂರ್ಯ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಫ್ಯಾನ್ಸಿ ಐಟಮ್ಸ್, ರೇಡಿಯೋ ಮತ್ತು ಹೊಲಿಗೆ ಯಂತ್ರಗಳ ಮಳಿಗೆ ಹೊಂದಿದ್ದ ಇವರು ಕೆಲ ವರ್ಷಗಳ ಹಿಂದೆ ನಿವೃತ್ತರಾಗಿ ಹುಟ್ಟೂರಾದ ಮಂಗಳೂರು ತಾಲೂಕಿನ ಮೇರ್ಲಪದವಿನಲ್ಲಿ ನೆಲೆಸಿದ್ದರು.
ಮೃತರು ಪತ್ನಿ ಮೋಲಿ ಸಲ್ಡಾನಾ, ಪುತ್ರರಾದ ಜೋಸೆಫ್ ಸಲ್ಡಾನಾ, ಜಾಲಿ ಜಾನ್ ಸಲ್ಡಾನಾ, ಪುತ್ರಿ ಉದೈಸೂರ್ಯ ಜೂಡಿ ಮೋನಿಸ್, ಅಳಿಯ ಜಾನ್ ಮೋನಿಸ್, ಸೊಸೆಯಂದಿರಾದ ಅನಿತಾ, ಜಾಯ್ಸ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಜ. 20 ರಂದು ನೀರ್’ಮಾರ್ಗ ಚರ್ಚ್ ಸಿಮೆತರಿಯಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.