ವಿಟ್ಲ: ತೆಂಗಿನ ಮರದಿಂದ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿರುವ ವಿಟ್ಲ-ಪಡ್ನೂರು ಗ್ರಾಮದ ಕೋಡಪದವು ನಿವಾಸಿ ನಾರಾಯಣ ನಾಯ್ಕ ರವರಿಗೆ ಎಮ್.ಆರ್.ಜಿ.(M.R.G) ಗ್ರೂಪ್, ಇದರ ಮಾಲಕರಾದ ಪ್ರಕಾಶ್ ಶೆಟ್ಟಿ ರವರು ಅಶಕ್ತರ ಯೋಜನೆಯಲ್ಲಿ ಸುಮಾರು 25.000/- ರೂ ಮೌಲ್ಯದ ಚೆಕ್ಕ್ ಅನ್ನು ನೀಡಿ ಸಹಕರಿಸಿದರು.
ವಿಟ್ಲ-ಪಡ್ನೂರು ಮಹಾಶಕ್ತಿಕೇಂದ್ರದ ವತಿಯಿಂದ ಆಹಾರದ ಕಿಟ್ ಅನ್ನು ಸಹ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಸದಸ್ಯರಾಗಿರುವ ರವೀಶ್ ಶೆಟ್ಟಿ ಕರ್ಕಳ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಷ್ಮಾ ಶಂಕರಿ ಬಳಿಪಗುಳಿ, ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಮಾಜಿ ಸದಸ್ಯರಾದ, ಉಮೇಶ್ ಶೆಟ್ಟಿ ತಾರಿಯಡ್ಕ, ವಿಟ್ಲ-ಪಡ್ನೂರು ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಹಾಗೂ ಸೀತಾರಾಮ ಗೌಡ ಕುಕ್ಕಿಲ ಉಪಸ್ಥಿತರಿದ್ದರು.