ಪುತ್ತೂರು:ದಿ ಆರ್ಟ್ ಆಫ್ ಜ್ಯುವೆಲ್ಲರಿ(ಎಒಜೆ) ಮ್ಯಾಗಜೀನ್ 2024-25ರ ಅವಧಿಗೆ ಭಾರತದ ಸರಿ ಸುಮಾರು 5ಲಕ್ಷ ಜ್ಯುವೆಲ್ಲರಿಗಳ ಪೈಕಿ ಒಟ್ಟು ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಜ್ಯುವೆಲ್ಲರಿ ಸಂಸ್ಥೆಗಳ ರ್ಯಾಂಕಿಂಗ್ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಪುತ್ತೂರು ಸೇರಿದಂತೆ ಹಲವು ಕಡೆ ಶಾಖೆಗಳನ್ನು ಹೊಂದಿರುವ ಜಿ ಎಲ್ ಆಚಾರ್ಯ ಜ್ಯುವೆಲ್ಲಸ್ರ್ ಸಂಸ್ಥೆಯೂ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ದಿ ಆರ್ಟ್ ಆಫ್ ಜ್ಯುವೆಲ್ಲರಿ ಸಂಚಿಕೆಯಲ್ಲಿ ಭಾರತದಲ್ಲಿ ಚಿನ್ನ ಮತ್ತು ಆಭರಣಗಳ ಉದ್ಯಮದಲ್ಲಿ ಸಾಧಕರನ್ನು ಗುರುತಿಸುತ್ತದೆ. ಈ ಬಾರಿ ಟಾಪ್ 100 ಚಿನ್ನದ ವ್ಯಾಪಾರಿಗಳನ್ನು ಆರ್ಥಿಕ ವರ್ಷದ 2025ರಲ್ಲಿ ಒಟ್ಟು ವ್ಯವಹಾರ ಆದಾಯದ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ. ಈ ಪಟ್ಟಿಯನ್ನು ಇಂಟರ್‌ನ್ಯಾಷನಲ್ ಜಿಮೋಲಿಜಿಕಲ್ ಇನ್‌ಸ್ಟಿಟ್ಯೂಟ್ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗಿದ್ದು, ಪುತ್ತೂರಿನ ಜಿ ಎಲ್ ಆಚಾರ್ಯ ಚಿನ್ನಾಭರಣ ಮಳಿಗೆ ಸ್ಥಾನ ಪಡೆದುಕೊಂಡಿದೆ.
ದಿ ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜೀನ್ ಭಾರತದ ಆಭರಣ ಉದ್ಯಮದ ಪ್ರಮುಖ ಸುದ್ದಿ ಮತ್ತು ವಿಶ್ಲೇಷಣೆಗಳನ್ನು ಒದಗಿಸುವ ಪ್ರಮುಖ ಮಾಧ್ಯಮವಾಗಿದೆ. ಜ್ಯುವೆಲ್ಲರಿಗಳ ಒಟ್ಟು ವ್ಯವಹಾರದಲ್ಲಿ ಈ ಆಯ್ಕೆ ನಡೆಯುತ್ತದೆ. ನಮ್ಮ ಸಂಸ್ಥೆ 100 ಚಿನ್ನಾಭರಣಗಳ ಮಳಿಗೆಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ನಮಗೆ ಸಂತೋಷದ ಸಂಗತಿಯೆಂದು ಸಂಸ್ಥೆಯ ಚೇರ್‌ಮ್ಯಾನ್‌ರಾದ ಜಿ.ಎಲ್ ಬಲರಾಮ ಆಚಾರ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























