ಪುತ್ತೂರು: ಸಿಝ್ಲರ್ ಯುವಕ ಮಂಡಲದ ಅಧ್ಯಕ್ಷ, ಸಾಮೆತ್ತಡ್ಕ ನಿವಾಸಿ ಶ್ರೀನಾಥ್ ಆಚಾರ್ಯ (39) ರವರು ಹೃದಯಾಘಾತದಿಂದಾಗಿ ಜ.28 ರಂದು ಮುಂಜಾನೆ ನಿಧನರಾದರು.
ಮೂಲತಃ ಕೆಮ್ಮಿಂಜೆ ನಿವಾಸಿಯಾಗಿದ್ದ ನಿವೃತ ಸರಕಾರಿ ಉದ್ಯೋಗಿ ಮಂಜುನಾಥ್ ಮತ್ತು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಸಿಬ್ಬಂದಿ ದಿ. ಕಾಂತಿಬಾಯಿ ರವರ ಪುತ್ರರಾದ ಶ್ರೀನಾಥ್ ರವರು ಸ್ವ ಉದ್ಯೋಗ ನಡೆಸುತ್ತಿದ್ದರು.
ಸಿಝ್ಲರ್ ಯುವಕ ಮಂಡಲದ ಅಧ್ಯಕ್ಷರಾಗಿದ್ದ ಶ್ರೀನಾಥ್ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದು, ಯುವಕರಿಗೆ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಹುರಿದುಂಬಿಸುತ್ತಿದ್ದರು. ತಮ್ಮ ಸೌಮ್ಯ ಸ್ವಭಾವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ತಂದೆ, ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.