ವಿಟ್ಲ: ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷರಾಗಿದ್ದ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ವಿಟ್ಲ ಲಯನ್ಸ್ ಕ್ಲಬ್ ಗೆ 50 ವರ್ಷಗಳ ಇತಿಹಾಸವಿದ್ದು, ಸತೀಶ್ ಕುಮಾರ್ ಇರಾಬಾಳಿಕೆ ರವರು 2015-16 ಅವಧಿಯಲ್ಲಿ ವಿಟ್ಲ ಲಯನ್ಸ್ ಸೇವಾ ಟ್ರಸ್ಟ್ ಅನ್ನು ಸ್ಥಾಪಿಸಿ, ಅಧ್ಯಕ್ಷರಾಗಿದ್ದರು. ಬಳಿಕ ಕಟ್ಟಡಕ್ಕೆ ಅಡಿಪಾಯ ಹಾಕಿದ್ದರು. ಇದೀಗ ವೈಯುಕ್ತಿಕ ಕಾರಣದಿಂದ ರಾಜೀನಾಮೆ ಸಲ್ಲಿಸಿದ್ದು, ಈ ಸುದ್ದಿ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.