ಮಾ. 19,20,21ರಂದು ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಆಶ್ರಯದಲ್ಲಿ ನಡೆಯಲಿರುವ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್ ಗಳ ಓವರ್ ಆರ್ಮ್ ಅದ್ದೂರಿ ಕ್ರಿಕೆಟ್ ಪಂದ್ಯಾವಳಿ ಸಿಝ್ಲರ್ ಟ್ರೋಫಿ – 2021ರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾ. 10ರಂದು ನಡೆಯಿತು.
ಈ ಸಂದರ್ಭದಲ್ಲಿ ಜಾನ್ ಪೀಟರ್ ಡಿಸಿಲ್ವ, ಸೂರಜ್ ಶೆಟ್ಟಿ, ಮಹೇಶ್ ಭಟ್, ರಾಕೇಶ್ ಮದಕ, ಪ್ರಸಾದ್ ಕುಮಾರ್, ಕಿಶೋರ್ ಪೂಜಾರಿ, ರಫೀಕ್, ಇಮ್ರಾಝ್, ದೀಪಕ್ ಮಲ್ಯ, ಸಂದೀಪ್ ರೈ, ಶ್ರೀನಾಥ್ ಆಚಾರ್ಯ, ಸುಭಾಷ್ ರೈ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.